ಅಂಬರೀಶ್ ಇಲ್ಲದೇ ಮೌನವಾದ ಶ್ವಾನಗಳು..!

Public TV
2 Min Read
AMBI DOGS copy

– ಒಡೆಯನಿಗಾಗಿ ಕಾಯುತ್ತಿವೆ ‘ಕನ್ವರ್’, ‘ಬುಲ್ ಬುಲ್’

ಬೆಂಗಳೂರು: ಪಂಚಭೂತಗಳಲ್ಲಿ ಲೀನರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗಾಗಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದರೆ, ಇತ್ತ ಅಂಬಿ ಪ್ರೀತಿಯಿಂದ ಸಾಕಿದ ಶ್ವಾನಗಳು ಕೂಡ ಮೂಕ ರೋಧನೆ ಅನುಭವಿಸುತ್ತಿವೆ.

ಹಿರಿಯ ನಟ ಅಂಬರೀಶ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ ಎರಡು ಶ್ವಾನಗಳನ್ನು ಸಾಕಿದ್ದರು. ಅವುಗಳಿಗೆ ಕನ್ವರ್ ಮತ್ತು ಬುಲ್ ಬುಲ್ ಎಂಬ ಹೆಸರನ್ನು ಕೂಡ ನಾಮಕರಣ ಮಾಡಿದ್ದರು. ಅಂಬಿ ಅವರೇ ಪ್ರತಿ ದಿನ ಕನ್ವರ್ ಮತ್ತು ಬುಲ್ ಬುಲ್ ಶ್ವಾನದ ಜೊತೆ ವಾಕ್ ಹೋಗುತ್ತಿದ್ದರು.

DOGS

ಅಷ್ಟೇ ಅಲ್ಲದೇ ಅವರು ಜೊತೆ ಸಮಯ ಸಿಕ್ಕಾಗ ಪ್ರೀತಿಯಿಂದ ಶ್ವಾನದ ಜೊತೆ ಮಾತನಾಡುತ್ತಿದ್ದರು. ಜೊತೆಗೆ ಅಂಬರೀಶ್ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು ತಮ್ಮ ಒಡೆಯನಿಗೆ ಸಂದೇಶ ರವಾನಿಸುತ್ತಿದ್ದವು. ಆದೆರೆ ಈಗ ತಮ್ಮ ಒಡೆಯ ವಾಕ್ ಕರೆದುಕೊಂಡು ಹೋಗಿಲ್ಲ, ನಮ್ಮ ಬಳಿಕ ಬಂದು ಮಾತು ಆಡಿಸಲಿಲ್ಲ ಎಂದು ಶ್ವಾನಗಳು ಮೌನವಾಗಿವೆ.

ಕಳೆದ ನಾಲ್ಕು ದಿನಗಳಿಂದ ಅವುಗಳನ್ನು ಮಾತನಾಡಿಸೋರು, ವಾಕಿಂಗ್ ಕರೆದುಕೊಂಡು ಹೋಗುವವರು ಮತ್ತು ಊಟ ಕೊಡುವವರು ಯಾರು ಇಲ್ಲದಂತಾಗಿದೆ. ಆದ್ದರಿಂದ ಸರಿಯಾಗಿ ಊಟನೂ ಮಾಡದೇ ಮೌನವಾಗಿ ಒಂದು ಮೂಲೆಯಲ್ಲಿ ಮಲಗಿ ಒಡೆಯನಿಗಾಗಿ ಕಾಯುತ್ತಿವೆ. ಅವುಗಳ ಮೂಕರೋಧನೆಯನ್ನು ನೋಡಿದರೆ ಎಲ್ಲರ ಮನಸ್ಸು ಕೂಡ ಕರಗುತ್ತದೆ.

1 ambareesh pet dogs 1543135890

ಶ್ವಾನಗಳ ಹೆಸರಿನ ಇತಿಹಾಸ:
ನಟ ಅಂಬರೀಶ್ ಅಭಿನಯಿಸಿದ್ದ ‘ನಮ್ಮೂರ ಹಮ್ಮೀರ’ ಸಿನಿಮಾವೂ ಅವರ ಸಿನಿಮಾ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತ್ತು. 1972 ರಲ್ಲಿ ತೆರೆಕಂಡ ‘ನಾಗರಹಾವು’ ಮತ್ತು 1981 ರಲ್ಲಿ ತೆರೆಕಂಡ ‘ಅಂತ’ ಸಿನಿಮಾ ಮೂಲಕ ಅಂಬರೀಶ್ ಸ್ಯಾಂಡಲ್‍ವುಡ್ ನಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಈ ಎರಡು ಸಿನಿಮಾಗಳಲ್ಲಿ ‘ಬುಲ್ ಬುಲ್ ಮಾತಾಡಕ್ಕಿಲ್ವಾ…’ ಮತ್ತು ‘ಕುತ್ತೇ…ಕನ್ವರ್ ನಹೀ ಕನ್ವರ್ ಲಾಲ್ ಬೋಲೋ’ ಎಂಬ ಫೇಮಸ್ ಡೈಲಾಗ್ ಇದ್ದವು. ಅಂಬರೀಶ್ ಅವರಿಗೆ ಆ ಡೈಲಾಗ್ ಎಂದರೆ ತುಂಬಾ ಇಷ್ಟವಾಗಿತ್ತು. ಆದ್ದರಿಂದ ಅವರು ಪ್ರತಿದಿನ ಫೇಮಸ್ ಡೈಲಾಗ್ ನೆನಪಿಸಿಕೊಳ್ಳಬೇಕೆಂದು ತಮ್ಮ ಪ್ರೀತಿಯ ಶ್ವಾನಗಳಿಗೆ ‘ಕನ್ವರ್’ ಮತ್ತು ‘ಬುಲ್ ಬುಲ್’ ಅಂತ ಅಂಬರೀಶ್ ನಾಮಕರಣ ಮಾಡಿದ್ದರು.

AMBI

ಸೋಮವಾರ ಸಂಜೆ 6 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಆದರೆ ಅಂಬಿಯ ಅಭಿಮಾನಿಗಳು ಮಧ್ಯರಾತ್ರಿಯಾದರೂ ಸ್ಟುಡಿಯೋಗೆ ಬರುತ್ತಿದ್ದರು. ಬಳಿಕ ಅಂಬಿ ಪತ್ನಿ ಸುಮಲತಾ ಮತ್ತು ಮಗ ಅಭಿಷೇಕ್ ಅವರಿಗೆ ಸಂಬಂಧಿಕರು, ಸ್ನೇಹಿತರು ರಾತ್ರಿಯೆಲ್ಲ ಬಂದು ಸಾಂತ್ವಾನ ಹೇಳಿದ್ದಾರೆ. ಮುಂಜಾನೆಯಿಂದಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಹೋಗುತ್ತಿದ್ದಾರೆ.

ಇಂದು ಕುಟುಂಬದವರು ಕಂಠೀರವ ಸ್ಟುಡಿಯೋಗೆ ಹೋಗಿ ಹಾಲು-ತುಪ್ಪ ಬಿಡುವ ಕಾರ್ಯಕ್ರಮವಿದೆ. ಬೆಳಗ್ಗೆ 10ಗಂಟೆ ಸುಮಾರಿಗೆ ಸುಮಲತಾ, ಅಭಿಷೇಕ, ಸ್ನೇಹಿತರು ಮತ್ತು ಸಂಬಂಧಿಕರು ಕಂಠೀರವ ಸ್ಟುಡಿಯೋ ಹೊರಡಲಿದ್ದು, ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

DOG

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *