ಧಾರವಾಡ: ನನಗೆ ಅಧಿಕಾರ ಇರಲಿ ಬಿಡಲಿ ಜನರು ಚಿಂತೆ ಮಾಡುವುದು ಬೇಡ, ನಾನು ಎಂದಿಗೂ ಸಿಎಂ ಇದ್ದಂತೆ ಎಂದು ನವಲಗುಂದದ ಮಾಜಿ ಶಾಸಕ ಕೋನರೆಡ್ಡಿ ಹೇಳಿದ್ದಾರೆ.
ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ನಾಯಕರ ಜಯಂತಿಗಳನ್ನು ಮಾಡುತ್ತೇವೆ. ಇದು ಸಮಾಜವನ್ನು ಒಂದಾಗಿಸುವ ಪ್ರಯತ್ನ ಅಷ್ಟೇ. ಈಗ ನಾನು ಸೋತರೂ ಕೂಡ ಮನೆಯಲ್ಲಿ ಕುಳಿತುಕೊಳ್ಳದೇ ಪಕ್ಷ ನೀಡಿದ ಕಾರ್ಯ ಮಾಡುತ್ತೇನೆ. ಹುಟ್ಟು ಜವಾಬ್ದಾರಿ ಬಂದಿದೆ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಮತ್ತೆ ಜನರ ಮುಂದೇ ಬರುತ್ತೇವೆ ಎಂದರು.
ಕೋನರೆಡ್ಡಿ ಅವರು ಭಾಷಣ ವಿಡಿಯೋ ವೈರಲ್ ಆಗಿದ್ದು, ಪಕ್ಷದ ನಾಯಕರಾದ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ನನಗೆ ಕೆಲ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಿರ್ವಹಿಸುತ್ತೇನೆ. ಕ್ಷೇತ್ರದ ಜನರು ಏನೇ ಸಮಸ್ಯೆ ಇದ್ದರೂ ಆ ಕೆಲಸ ಮಾಡಿಸಲು ನಾನು ಪ್ರಯತ್ನ ಮಾಡುತ್ತೇನೆ. ನನಗೆ ಅಧಿಕಾರ ಇರಲಿ ಬಿಡಲಿ, ಚಿಂತೆ ಮಾಡಬೇಡಿ ಎಂದು ಕೋನರೆಡ್ಡಿ ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv