ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

Public TV
2 Min Read
SACHIN SHAGHE copy

– ಚಾಕೃತಿಯ ಮೇಕಿಂಗ್ ವಿಡಿಯೋ ರಿಲೀಸ್

ಚಿಕ್ಕಬಳ್ಳಾಪುರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ ಅಪರೂಪದ ಗಿಫ್ಟೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಗಿಫ್ಟ್ ನ ಹರಿಕಾರ ಚಾಕೃತಿ ಕರಕುಶಲ ಕಲಾವಿದ ಸಚಿನ್ ಸಂಘೆ ಎಂಬುದಾಗಿ ತಿಳಿದುಬಂದಿದೆ.

ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮುದುಗೆರೆ ಗ್ರಾಮದ ಕಲಾವಿದ ಸಚಿನ್ ಸಂಘೆ ಅವರು ಸುಮಾರು 15 ಗಂಟೆ ಕೆಲಸ ಮಾಡಿ ದರ್ಶನ್ ಗೆ ಈ ಚಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಅವರು ಇದರ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

06294f24 132c 42e0 9c2e ba33ae125e84

ಸುಣ್ಣದ ಬಳಪ (ಚಾಕ್ ಪೀಸ್) ನಲ್ಲಿ ಅರಳಿರುವ ದರ್ಶನ್ ರ ಭಾವಚಿತ್ರ ನೋಡುಗರ ಗಮನ ಸೆಳೆಯುವಂತಿದೆ. ಈಗ ಮೇಕಿಂಗ್ ವಿಡಿಯೋ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಸಲಿಗೆ ದರ್ಶನ್ ರ ಈ ಚಾಕೃತಿ ಆರಳಿಸೋಕೆ ಸಚಿನ್ ಸಂಘೆ 15 ಗಂಟೆಗಳ ಕಾಲ ತಮ್ಮ ಪರಿಶ್ರಮ ಹಾಕಿ ತುಂಬಾ ಸೊಗಸಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಇನ್ನೂ 15 ಗಂಟೆಗಳ ತಮ್ಮ ಕಾರ್ಯವನ್ನ ಸ್ಲೋ ಮೋಷನ್ ವಿಡಿಯೋ ಮೂಲಕ 30 ಸೆಕೆಂಡ್ ಗೆ ಇಳಿಸಿ ಅದನ್ನ ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಯಾರು ಈ ಸಚಿನ್ ಸಂಘೆ…?:
ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ರೈತ ಕುಟುಂಬವರು. ಸದ್ಯ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಂಘೆ, ಸಿಸ್ಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಯಾ ಸಮಯದ ಟ್ರೆಂಡ್ ಗೆ ತಕ್ಕಂತೆ ಚಾಕೃತಿ ಗಳನ್ನ ಬಿಡಿಸೋದು ಇವರ ಹವ್ಯಾಸ.

42f1abda 0404 402f 9897 4705da160302 e1542873993699

ತಮ್ಮ ಶಾಲಾ ದಿನಗಳಿಂದಲೇ ಇಂತಹ ನೂರಾರು ಚಾಕೃತಿಗಳನ್ನ ಬಿಡಿಸಿರುವ ಸಚಿನ್ ಸಂಘೆ, ಅವುಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನಟ ಅಮಿತಾಬ್‍ಬಚ್ಚನ್ ರ ಚಾಕೃತಿಯನ್ನೂ ಕೂಡ ಮಾಡಿದ್ದರು. ತನ್ನದೇ ಚಾಕೃತಿಯನ್ನ ಕಂಡ ಅಮಿತಾಬ್‍ಬಚ್ಚನ್ ಸಚಿನ್ ಸಂಘೆ ಕೌಶಲ್ಯಕ್ಕೆ ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯ ಚಾಕೃತಿ ಬಿಡಿಸಿದ್ದ ಸಚಿನ್ ಸಂಘೆ ಅದನ್ನ ನೇರವಾಗಿ ಮೋದಿಯವರಿಗೆ ತಲುಪಿಸಿ ಅವರಿಂದಲೂ ಮೆಚ್ಚುಗೆ ಪಡೆದಿದ್ದರು.

5f43f2e3 4574 45fb 9cac 072cb9d09cd4

ಮೋದಿಯವರು ಸಹ ಅದನ್ನ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟ ಮಾಡಿ ಸಚಿನ್ ಸಂಘೆಯವರ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದರು. ಸಚಿನ್ ಹೆಸರಿಟ್ಟಿಕೊಂಡಿರುವ ಈ ಸಚಿನ್ ಸಂಘೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಚಾಕೃತಿ ಸಹ ಬಿಡಿಸಿ ಅವರನ್ನ ಭೇಟಿಯಾಗಿ ಉಡುಗೊರೆ ನೀಡಿದ್ದರು. ಇಷ್ಟು ಮಾತ್ರವಲ್ಲದೇ ಇತ್ತೀಚೆಗೆ ಲೋಕಾರ್ಪಣೆಗೊಂಡ ಸರ್ದಾರ್ ವಲ್ಲಭಾಯ್ ಪಟೇಲರ ಬೃಹತ್ ಪ್ರತಿಮೆಯ ಚಾಕೃತಿಯನ್ನ ಸಹ ಸಚಿನ್ ಸಂಘೆ ಬಿಡಿಸಿದ್ದಾರೆ. 

ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *