ಕೇಪ್‍ಟೌನ್: ತನ್ನ 9 ವರ್ಷದ ಮಗಳನ್ನು ಕಾಮುಕನೊಬ್ಬ ರೇಪ್ ಮಾಡಿದ ಸುದ್ದಿ ಕೇಳಿ ತಂದೆ ಆತನ ಮರ್ಮಾಂಗವನ್ನು ಕತ್ತರಿಸಿದ ಪ್ರಕರಣವೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಮಾಸ್ ಮಲಗಸ್ನ(66) ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಧರ್ಮಗುರು. 9 ವರ್ಷದ ಬಾಲಕಿ ಮೇಲೆ ಧರ್ಮಗುರು ಅತ್ಯಾಚಾರ ಎಸಗಿದ್ದಾರೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ತಂದೆಗೆ ಹಾಗೂ ಆತನ ಪತ್ನಿಗೆ ಹೇಳಿದ್ದಾನೆ. ಸದ್ಯ ಆ ತಂದೆ ಹಾಗೂ ಆತನ ಪತ್ನಿ ಎಲ್ಲ ಸಾಕ್ಷಿಗಳನ್ನು ಹುಡುಕಿ ತನ್ನ ಸ್ನೇಹಿತನೊಬ್ಬನ ಸಹಾಯದಿಂದ ಆರೋಪಿ ಧರ್ಮಗುರುವನ್ನು ಹುಡುಕಿದ್ದಾರೆ. ಆರೋಪಿಯನ್ನು ಹುಡುಕಿ ಆತನ ಮನೆಗೆ ನುಗ್ಗಿದ್ದಾರೆ.
ಆರೋಪಿ ವಿರುದ್ಧ ಸೇಡು ತಿರಿಸಿಕೊಳ್ಳಲು ಬಾಲಕಿಯ ತಂದೆ- ತಾಯಿ ಧರ್ಮಗುರು ಮನೆಗೆ ನುಗ್ಗಿದ್ದಾರೆ. ಅಲ್ಲದೇ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಧರ್ಮಗುರುವಿನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಬಳಿಕ ದಂಪತಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಬಂಧಿಸಲು ಒತ್ತಾಯಿಸಿದ್ದರು. ಆದರೆ ಪೊಲೀಸರು ಆರೋಪಿಯನ್ನು ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದಾನೆ.
ಈ ಘಟನೆಯಲ್ಲಿ ಧರ್ಮಗುರು ನಿಜವಾಗಿಯೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರಾ ಇಲ್ವಾ ಎಂಬುದು ತಿಳಿದುಬಂದಿಲ್ಲ. ಸದ್ಯ ಪೊಲೀಸರು ಆರೋಪಿಯ ಮರ್ಮಾಂಗ ಕತ್ತರಿಸಿದ ಬಾಲಕಿಯ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಧರ್ಮವನ್ನು ಹೇಳಿಕೊಡುವವರು ಮಕ್ಕಳ ಮೇಲೆ ಅತ್ಯಾಚಾರವೆಸಗಲು ಹೇಗೆ ಸಾಧ್ಯ ಎಂದು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ ಕೆಲವರು ಮರ್ಮಾಂಗ ಕತ್ತರಿಸಿದ ವ್ಯಕ್ತಿಯನ್ನು ಹೊಗಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews