ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!

Public TV
1 Min Read
SABARIMALE 1 1

ಬೆಂಗಳೂರು: ಅಯ್ಯಪ್ಪನ ಸನ್ನಿಧಾನದ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷ ತೆರಳುತ್ತಿರುವ ಕರ್ನಾಟಕದ ಭಕ್ತರಿಗೆ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಸಿಗುತ್ತಿದೆ.

ಒಂದು ಕಡೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯ ವಾತಾವರಣ ಇದ್ದರೆ, ಇನ್ನೊಂದಡೆ ಹಳೆ ಬಾಕಿ ಎಲ್ಲಾ ಸೇರಿಸಿ ಕೇರಳ ಸರ್ಕಾರ ರಾಜ್ಯದ ವಾಹನಗಳಿಗೆ ವಿಪರೀತ ಸುಂಕ ವಸೂಲಿಗೆ ನಿಂತುಬಿಟ್ಟಿದೆ.

sabari male

2014 ರಿಂದ ಸತತ ಮೂರು ವರ್ಷಗಳ ಕಾಲ ಕರ್ನಾಟಕಕ್ಕೆ ವಾಹನ ಸುಂಕ ವಿನಾಯಿತಿ ಇತ್ತು. ಆದರೆ ಈಗ ಏಕಾಏಕಿ ಕೋರ್ಟ್ ನಿಂದ ಆದೇಶ ಮಾಡಿಕೊಂಡು ಬಂದಿರುವ ಕೇರಳ ಸರ್ಕಾರ ಕರ್ನಾಟಕದ ಅಯ್ಯಪ್ಪ ಭಕ್ತರು ಬರುವ ವಾಹನಗಳಿಗೆ ಹಿಗ್ಗಾಮುಗ್ಗಾ ತೆರಿಗೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ಪಿ-ತಪ್ಪಿ ಕಳೆದ ಎರಡು ವರ್ಷಗಳ ಹಿಂದೆ ವಾಹನ ಕೇರಳಕ್ಕೆ ಹೋಗಿದ್ರೆ ಆ ವಾಹನಗಳಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು ದಂಡ ಹಾಕುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಕೇರಳ ಪೊಲೀಸರು ಈಗ ಹಳೆ ಬ್ಯಾಲೆನ್ಸ್ ವಾಹನದ ಸುಂಕವನ್ನು ವಸೂಲಿ ಮಾಡುತ್ತಿದ್ದಾರೆ. ಈಗಾಗಲೇ ಕರ್ನಾಟಕದ ವಾಹನಗಳು ದಂಡ ಕಟ್ಟಲಾರದೆ ಇದ್ದಿದ್ದಕ್ಕೆ ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

sabaramale

ತೆರಿಗೆ ಭಯಕ್ಕೆ ಟೂರಿಸ್ಟ್ ವಾಹನಗಳು ಕೇರಳಕ್ಕೆ ಎಂಟ್ರಿಯಾಗೋದಕ್ಕೆ ಹಿಂದೇಟು ಹಾಕುತ್ತಿವೆ. ಇನ್ನೊಂದಡೆ ಕರ್ನಾಟಕದ ಭಕ್ತರ ಸಂಖ್ಯೆಯೂ ಇಳಿಮುಖಗೊಂಡಿದೆ. ಇತ್ತ ಬಸ್‍ಗಳು ಕೂಡ ಶಬರಿಮಲೆಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿವೆ ಎಂದು ದಂಡ ಕಟ್ಟಿದ್ದ ರಮೇಶ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *