ಪ್ರಾಮಾಣಿಕವಾಗಿ ಮತಚಲಾಯಿಸಿ, ಇದು ನಿಮ್ಮ ಹಕ್ಕು – ರೇವಾ ವಿವಿಯಲ್ಲಿ ಮತ ಜಾಗೃತಿ ಅಭಿಯಾನ

Public TV
2 Min Read
REVA Election Jagruti 1

– 15 ದಿನಗಳ ಕಾಲ ಮನೆ ಮನೆ ತೆರಳಿ ಜಾಗೃತಿ ಮೂಡಿಸಲಿರುವ ವಿದ್ಯಾರ್ಥಿಗಳು

ಬೆಂಗಳೂರು: ಮತದಾನದ ಸಮಯದಲ್ಲಿ ಒತ್ತಡ ಹಾಗೂ ಯಾವುದೇ ಆಮಿಷಗಳಿಗೆ ಒಳಗಾಗದೇ ಪ್ರಮಾಣಿಕವಾಗಿ ಮತ್ತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಿ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಡಾ.ಪಿ. ಸಂಜೀವ್ ಕುಮಾರ್ ಹೇಳಿದ್ದಾರೆ.

ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರೇವಾ ವಿವಿಯ ಮತದಾನ ಸಾಕ್ಷರತಾ ಸಂಘಟನೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸುಮಾರು 200 ಕೋಟಿ ರೂ. ಮೌಲ್ಯದ ಸೀರೆ, ಮದ್ಯ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಧುನಿಕತೆಯಲ್ಲಿ ಮುಂದುವರಿಯುತ್ತಿರುವ ದೇಶದಲ್ಲಿ ಇಂತಹ ಆಮಿಷಗಳಿಗೆ ಯಾರು ಒಳಗಾಗಿ ನಿಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.

REVA Election Jagruti 2

ಇದೇ ವೇಳೆ ಸಾರ್ವಜನಿಕರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು ಹಾಗೂ ಪ್ರತಿ ಚುನಾವಣೆಯಲ್ಲಿ ನೈತಿಕವಾಗಿ ಮತದಾನ ಮಾಡಲು ಜಾಗೃತಿ ಮೂಡಿಸುವ ಸಲುವಾಗಿ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ರೇವಾ ವಿವಿ ಹೊಸ ಸಾಹಸಕ್ಕೆ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ ಎಂದು ಸಂಜೀವ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.

18 ವರ್ಷ ಪೂರ್ಣಗೊಂಡ ಯುವಕ, ಯುವತಿಯರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಅಲ್ಲದೇ ತಮ್ಮ ಹಕ್ಕನ್ನು ಕಡ್ಡಾಯವಾಗಿ ತಮ್ಮ ಮತದಾನದ ಚಲಾಯಿಸಿಸಬೇಕು. ದೇಶದಲ್ಲಿ ಸುಮಾರು 75 ಸಾವಿರ ಕೋಟಿಗೂ ಹೆಚ್ಚು ಮತದಾರರಿದ್ದು, ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ. ಇಂದು ನಗರ ಪ್ರದೇಶಗಳಲ್ಲಿ ಶೇ.50, ಗ್ರಾಮೀಣ ಭಾಗದಲ್ಲಿ ಶೇ.85 ರಷ್ಟು ಮತದಾನ ನಡೆಯುತ್ತಿದೆ. ಆದರೆ ವಿದ್ಯಾವಂತರು ಇಂದು ಮತದಾನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

REVA Election Jagruti 3

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶಾಮರಾಜು ಮಾತನಾಡಿ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 800 ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಮತದಾನ ಜಾಗೃತಿ ಆರಂಭಿಸಲಾಗಿದೆ. ಇಲ್ಲಿ ಶೇ.85 ರಷ್ಟು ಮತದಾನವಾಗುತ್ತಿದೆ. ಈ ಅಭಿಯಾನದಿಂದ ಶೇ.100 ರಷ್ಟು ಮತದಾನ ಆಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇಂದಿನಿಂದ ಸುಮಾರು 15
ದಿನಗಳವರೆಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿರಲ್ಲಿ ಅರಿವು ಮೂಡಿಸಿ ಮತ ಪಟ್ಟಿಗೆ ಹೆಸರು ಸೇರಿಸುವಂತೆ ಮನವಿ ಮಾಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ರಾಜ್ಯ ಮುಖ್ಯ ಚುನಾವಣಾಧಿಕಾರಿ ಶ್ರೀನಿವಾಸಾಚಾರಿ, ರೇವಾ ವಿವಿ ಕುಲಪತಿ ಡಾ.ಎಸ್.ವೈ.ಕುಲಕರ್ಣಿ, ಕುಲಸಚಿವ ಡಾ.ಎಂ.ಧನಂಜಯ, ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮತ್ತಿತರರು ಹಾಜರಿದ್ದರು.

ಯಾವ ರೀತಿ ಜಾಗೃತಿ ಕಾರ್ಯಕ್ರಮ?
ಮನೆಮನೆಗೆ ತೆರಳಿ ಪ್ರಜೆಗಳೊಂದಿಗೆ ಸಂವಾದ ನಡೆಸಿವುದು, ಜನರ ಮತದಾನದ ವಿಧಾನವನ್ನು ವಿಶ್ಲೇಷಿಸುವ ಸಮೀಕ್ಷೆ, ಬಿಬಿಎಂಪಿ ಜೊತೆ ಸೇರಿ ಬೀದಿ ನಾಟಕ, ಅಣಕು ಪ್ರದರ್ಶನ, ರೋಡ್ ಶೋ ಮೂಲಕ ಸ್ಫೂರ್ತಿ ಭಾಷಣ, ಕಲಾ ಪ್ರದರ್ಶನಗಳ ಮೂಲಕ ಜಾಗೃತಿ ಹಾಗೂ ಯುವ ಮತದಾರರ ಉತ್ಸವ ನಡೆಸಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *