ತುಮಕೂರು: ಇಲ್ಲಿನ ಬನ್ನಿರಾಯನಗರದಲ್ಲಿ ಶಿವಶಂಕರ್ ಎಂಬವರು ಸದ್ದಿಲ್ಲದೆ ಗೋತಳಿಗಳ ಸಂರಕ್ಷಣೆ ಹಾಗೂ ಗೋ ಉತ್ಪನ್ನಗಳ ಔಷಧಿ ಗುಣಗಳ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ.
ಬಿಎಸ್ಸಿ ಪದವೀಧರರಾದ ಶಿವಶಂಕರ್ ಬೆಂಗಳೂರಿನಲ್ಲಿ ಚಾಲಕ ವೃತ್ತಿಯಲ್ಲಿದ್ದರು. ಒತ್ತಡದ ಜೀವನ, ಆಧುನಿಕ ಆಹಾರ ಪದ್ಧತಿಯಿಂದ ಇವರ ಸ್ನೇಹಿತರ ಅಕಾಲಿಕ ಸಾವು ಆತಂಕ ಮೂಡಿಸಿತ್ತು. ಇದರಿಂದ ಚಿಂತೆಗೀಡಾದ ಶಿವಶಂಕರ್, ಚಾಲಕ ವೃತ್ತಿ ಬಿಟ್ಟು ತುಮಕೂರಿನಲ್ಲಿ ದೇಸಿ ತಳಿ “ಗಿರ್” ಹಸುಗಳ ಸಾಕಾಣೆಯ ಮೂಲಕ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದಾರೆ.
2011ರಲ್ಲಿ ಮಧುಗಿರಿಯಲ್ಲಿ ಹಸುಗಳ ಫಾರ್ಮ್ ಆರಂಭಿಸಿದ್ದರು. ನೀರಿನ ಕೊರತೆಯಿಂದ ಮಧುಗಿರಿಯಲ್ಲಿ ಮುಚ್ಚಿ ಈಗ ತುಮಕೂರಿನ ಬನ್ನಿರಾಯನಗರದಲ್ಲಿ `ಗೋ ಲೋಕ’ವನ್ನೇ ಸೃಷ್ಠಿಸಿದ್ದಾರೆ. ಸುಮಾರು 16 ಹಸುಗಳು ಈ ಗೋಶಾಲೆಯಲ್ಲಿ ಇದೆ. ನಿತ್ಯ 90 ಲೀಟರ್ ಹಾಲು ಸಂಗ್ರಹವಾಗ್ತಿದ್ದು, ಲೀಟರ್ ಹಾಲಿಗೆ 70 ರೂ ನಿಗದಿ ಮಾಡಲಾಗಿದೆ. ದಿನವೊಂದಕ್ಕೆ 6,500 ರೂ ದುಡಿಯುತ್ತರೋದಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಶಿವಶಂಕರ್ ತಿಳಿಸಿದ್ದಾರೆ.
ಗೋಲೋಕ ಎಂಬ ಟ್ರಸ್ಟ್ ಸ್ಥಾಪಿಸಿ ದೇಸಿ ತಳಿಗಳ ಸಂತತಿ ಸಂರಕ್ಷಣೆ, ಗೋ ಉತ್ಪನ್ನ-ಹೈನುಗಾರಿಕೆ ಲಾಭಗಳ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ. ಇವರಿಂದ ಪ್ರೇರಣೆಗೊಂಡ ಹಲವರು ಒಂದೇ ವರ್ಷದಲ್ಲಿ 18 ಕಡೆ ಗಿರ್ ತಳಿಗಳ ಗೋಶಾಲೆ ಆರಂಭಿಸಿದ್ದಾರೆ ಅಂತ ಪ್ರೇರಣೆ ಪಡೆದ ಸತ್ಯಾನಂದ ಹೇಳಿದ್ದಾರೆ.
ಸೆಗಣಿ ಹಾಗೂ ಗೋಮೂತ್ರದಿಂದ ತಯಾರಿಸುವ ಜೀವಾಮೃತ, ಅಗ್ನಿ ಹೋತ್ರ. ಗೋಮೂತ್ರ ಅರ್ಕಗಳ ತಯಾರಿಕೆ ಹಾಗೂ ಬಳಕೆ ಬಗ್ಗೆ ಶಿವಶಂಕರ್ ಅವರು ತರಬೇತಿ ನೀಡ್ತಿದ್ದಾರೆ.
https://www.youtube.com/watch?v=AbXFdoSzGxM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews