ಸೊಂಟ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ರಾಖಿಯ ನೋವಿನ ಮಾತು ಕೇಳಿ

Public TV
2 Min Read
Rakhi 5

ಮುಂಬೈ: ಅಮೆರಿಕನ್ ರೆಸ್ಲರ್ ಗೆ ಚಾಲೆಂಜ್ ಹಾಕಿ ಸೊಂಟ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ರಾಖಿ ಸಾವಂತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ರಾಖಿ ಮೊದಲ ಬಾರಿಗೆ ದುಃಖದ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ನನ್ನ ಮೇಲಿನ ಹಲ್ಲೆಯ ಹಿಂದೆ ಷಡ್ಯಂತ್ರ ಇದ್ದು, ಉದ್ದೇಶಪೂರ್ವಕವಾಗಿ ರೋಬೆಲ್ ನನ್ನನ್ನು ನೆಲಕ್ಕೆ ಅಪ್ಪಳಿಸಿ ನಾನು ಆಸ್ಪತ್ರೆ ಸೇರುವಂತೆ ಮಾಡಿದ್ದಾಳೆ ಎಂದು ಕಿಡಿಕಾರಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಪಂಚಕುಲಾದಲ್ಲಿ ನಡೆದಿದ್ದು ಆಕಸ್ಮಿಕ ಘಟನೆ ಅಲ್ಲ. ಎಲ್ಲವೂ ಷಡ್ಯಂತ್ರ ರಚಿಸಿ ನನ್ನನ್ನು ಆ ವ್ಯೂಹದಲ್ಲಿ ಸಿಲುಕಿಸಲಾಗಿತ್ತು. ನಾನು ಅಖಾಡದಲ್ಲಿ ಅಮೆರಿಕಾದ ಎಮ್ಮೆ ತರಹದ, ಡುಮ್ಮಿ ರೋಬೆಲ್ ಗೆ ಡ್ಯಾನ್ಸ್ ಮಾಡುವಂತೆ ಚಾಲೆಂಜ್ ಹಾಕಿದ್ದೆ. ಆದ್ರೆ ಆಕೆ ಡ್ಯಾನ್ಸ್ ಮಾಡುತ್ತಾ ನನ್ನ ಎತ್ತಿಕೊಂಡು ಅಪ್ಪಳಿಸಿದಳು. ಇಂದು ನಾನು ಬೆನ್ನು ನೋವಿನಿಂದ ಅಸ್ಪತ್ರೆಗೆ ದಾಖಲಾಗಿದ್ದಾನೆ. ಈ ಎಲ್ಲ ಘಟನೆ ಹಿಂದೆ ನಟಿ ತನುಶ್ರೀ ದತ್ತಾಳ ಕೈವಾಡ ಇದೆ. ರೋಬೆಲ್ ಮತ್ತು ತನುಶ್ರೀ ಇಬ್ಬರು ಅಮೆರಿಕಾದ ನಿವಾಸಿಗಳು. ಹಾಗಾಗಿ ತನುಶ್ರೀಯೇ ಹಲ್ಲೆ ನಡೆಸಿದ್ದಾಳೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.

tanushree rakhi sawant

ಮೀಟೂ ಆರೋಪ:
ತನುಶ್ರೀ ಬಾಲಿವುಡ್ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ. ತನು ಒಳಗೆ ಒಬ್ಬ ಪುರುಷನಿದ್ದಾನೆ. ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸೆಗಿದ್ದಾಳೆ. ಅಲ್ಲದೇ ನನ್ನನ್ನು ರೇವ್ ಪಾರ್ಟಿಗೂ ಕರೆಯುತ್ತಿದ್ದಳು. ನನಗೆ ಇದನ್ನು ಹೇಳುವುದ್ದಕ್ಕೆ ತುಂಬಾ ನಾಚಿಕೆ ಆಗುತ್ತಿದೆ ಹಾಗೂ ದುಃಖವಾಗುತ್ತಿದೆ. 12 ವರ್ಷಗಳ ಹಿಂದೆ ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ಒಬ್ಬಳು ಯುವತಿಯಾಗಿ ನಾನು ಈ ರೀತಿ ಹೇಳುವುದು ಸರಿಯಲ್ಲ. ಆದರೆ ನನಗೆ ಇಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ರಾಖಿ ಗಂಭೀರ ಆರೋಪ ಮಾಡಿದ್ದರು.

ಏನಿದು ಘಟನೆ?
ರಾಖಿ ಸಾವಂತ್ ಭಾನುವಾರ ನಡೆದ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರೋಚಕ ಕುಸ್ತಿಯನ್ನು ವೀಕ್ಷಿಸಲು ಗ್ರೇಟ್ ಕಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಅಖಾಡಕ್ಕೆ ಧುಮುಕಿದ ಮಹಿಳಾ ಕುಸ್ತಿಪಟು ರೋಬೆಲ್, ಪಂಚಕುಲದಲ್ಲಿ ನನ್ನನ್ನು ಎದುರಿಸುವ ಯಾರದರೂ ಮಹಿಳೆ ಇದ್ದರೆ ಬನ್ನಿ ಎಂದು ಬಹಿರಂಗ ಸವಾಲು ಹಾಕಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀಕ್ಷಕರು ರೋಬೆಲ್ ಸಹವಾಸವೇ ಬೇಡ ಎಂದು ದೂರ ಉಳಿದಿದ್ದರು.

Rakhi Sawanth a

ಅತಿಥಿಯಾಗಿ ಬಂದಿದ್ದ ರಾಖಿ ಸಾವಂತ್ ದಿಢೀರ್ ಅಂತಾ ಅಖಾಡಕ್ಕೆ ಧುಮುಕಿದ್ದಾರೆ. ಕುಸ್ತಿ ಆಡುವ ಮೊದಲು ರಾಖಿ ನೀನು ಡ್ಯಾನ್ಸ್ ಮಾಡಬೇಕೆಂದು ಚಾಲೆಂಜ್ ಹಾಕಿದರು. ರಾಖಿ ಚಾಲೆಂಜ್ ಸ್ವೀಕರಿಸಿದ ರೋಬೆಲ್ ವೇದಿಕೆಯಲ್ಲಿ ಹಾಕಿದ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಇತ್ತ ಹಾಡು ಕೊನೆಗೊಳ್ಳುತ್ತಿದ್ದಂತೆ ರೋಬೆಲ್ ಎದುರು ನಿಂತಿದ್ದ ರಾಖಿಯನ್ನು ಭುಜದ ಮೇಲೆ ಎತ್ತಿ ನೆಲಕ್ಕೆ ಅಪ್ಪಳಿಸಿದ್ದರು.

https://www.instagram.com/p/BqEwAhrhhtK/

https://www.instagram.com/p/BqEv48zBQPs/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *