ಬೆಂಗಳೂರು: ಬೆಳಕಿನ ಚಿತ್ತಾರ ದೀಪಾವಳಿಗೆ ಅದೆಷ್ಟೇ ಜಾಗೃತಿ ಮೂಡಿಸಿದ್ರೂ ಪಟಾಕಿಗಳ ಅಬ್ಬರ ಹೆಚ್ಚಾಗಿರುತ್ತದೆ. ಪಟಾಕಿ ಹಚ್ಚುವವರಿಗೆ ಸಡಗರ. ಆದರೆ ಸ್ಫೋಟಕ ಶಬ್ಧಕ್ಕೆ ಪ್ರಾಣಿಗಳು ಬೆದರುತ್ತೆ. ನಮಗಿಂತ ಹತ್ತು ಪಟ್ಟು ಹೆಚ್ಚು ಶಬ್ಧ ಅವುಗಳ ಕಿವಿಗೆ ಅಪ್ಪಳಿಸೋದ್ರಿಂದ ಪಟಾಕಿ ಶಬ್ಧ ಅವುಗಳಿಗೆ ಹಾನಿಯಾಗುತ್ತೆ. ಇದಕ್ಕಾಗಿ ಬೆಂಗಳೂರು ಯುವತಿಯೊಬ್ಬರು ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ್ದಾರೆ.
ಬೆಂಗಳೂರಿನ ಯುವತಿ ರೇಖಾ ಪ್ರಾಣಿಗಳ ಭಾವನೆಯನ್ನು ಬೋರ್ಡ್ ನಲ್ಲಿ ಬರೆದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಾಣಿ ಪ್ರಿಯೆ ರೇಖಾ ಬೆಂಗಳೂರಿನ ನಗರದ ಅನೇಕ ಕಡೆ ಸಂಚರಿಸಿ ನಾಯಿ, ಹಸು, ಬೆಕ್ಕಿನ ಮುಂದೆ ಪಟಾಕಿ ಬಿಟ್ಹಾಕಿ, ದೀಪ ಹಚ್ಚಿ ಅನ್ನುವ ಸಂದೇಶವನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅಂಧಕಾರವನ್ನು ತೊಲಗಿಸುವ ದೀಪಾವಳಿ ದಿನ ಮೂಕ ಪ್ರಾಣಿಗಳ ಬಗ್ಗೆ ಕನಿಕರವಿರಲಿ. ಸ್ಫೋಟಕ ಬಳಸದೇ ದೀಪ ಬೆಳಗಿ ಹಬ್ಬ ಆಚರಿಸೋಣ ಅಂತಾ ಮನವಿ ಮಾಡಿಕೊಂಡರು. ದೀಪಾವಳಿ ಪಟಾಕಿ ಶಬ್ಧಕ್ಕೆ ಬೆದರಿ ಅದೆಷ್ಟೋ ಪ್ರಾಣಿಗಳು ಓಡಿ ಹೋಗುತ್ತೆ. ಪರಿಸರಕ್ಕೆ, ಪ್ರಾಣಿಗಳಿಗೆ ಮಾರಕವಾಗಿರುವ ಪಟಾಕಿ ಬಿಟ್ಟು ದೀಪದಿಂದ ದೀಪ ಹಚ್ಚಿ ಬೆಳಕಿನ ಹಬ್ಬ ಆಚರಿಸಿ ಎಂನ ಸಂದೇಶವನ್ನು ಸಾರುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv