ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

Public TV
1 Min Read
mys sa ra mahesh collage copy

ಮೈಸೂರು: ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದಕ್ಕೆ ಕಾರ್ಯಕ್ರಮದ ಮಧ್ಯೆಯೇ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೊರನಡೆದಿದ್ದಾರೆ.

ನಗರದ ಮಾನಸ ಗಂಗೋತ್ರಿ ಕ್ಯಾಂಪಸ್‍ನಲ್ಲಿ ಗಾಂಧಿ ಕುರಿತ ಸಿಮೆಂಟ್ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಸಚಿವರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಇದಾದ ನಂತರ ಕ್ಯಾಂಪಸ್ ಆವರಣದಲ್ಲಿದ್ದ ಕಲಾಕೃತಿಗಳನ್ನು ಉದ್ಘಾಟನೆ ಮಾಡಿ, ಅಧಿಕಾರಿಗಳನ್ನು ಬೈಯುತ್ತಾ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾಗದೇ ತೆರಳಿದರು. ಈ ವೇಳೆ ಸ್ಥಳದಲ್ಲೇ ಇದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮಕ್ಕೆ ಬಾರಯ್ಯ ಎಂದು ಕರೆದರು. ಇಲ್ಲ ಇಲ್ಲ ನನಗೆ ಬೇರೆ ಕಾರ್ಯಕ್ರಮವಿದೆ ಎನ್ನುತ್ತಾ ಸಾ.ರಾ.ಮಹೇಶ್ ಹೊರಟು ಹೋದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *