ಸಿಎಂ ಎಚ್‍ಡಿಕೆ ಟಿಪ್ಪು ಜಯಂತಿ ಆಚರಿಸ್ತಿರೋದು ಯಾಕೆ: ಸರ್ಕಾರದ ರಹಸ್ಯ ತಿಳಿಸಿದ ಕೋಟ

Public TV
2 Min Read
CM KOTA

ಉಡುಪಿ: ಟಿಪ್ಪು ಜಯಂತಿ ಆಚರಿಸದೇ ಇದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲವನ್ನು ವಾಪಸ್ ಪಡೆಯಬಹುದು ಎನ್ನುವ ಹೆದರಿಕೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ಬಾರಿ ಆಚರಣೆಗೆ ಮುಂದಾಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದೆ. ಅಲ್ಪಸಂಖ್ಯಾತರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕವಾಡ್ತಿದೆ. ಟಿಪ್ಪು ಜಯಂತಿ ಮಾಡದೇ ಇದ್ರೆ ಸಿದ್ದರಾಮಯ್ಯ ಬೆಂಬಲ ಹಿಂದೆ ಪಡಿತಾರೆ ಅಂತ ಕುಮಾರಸ್ವಾಮಿಗೆ ಹೆದರಿಕೆ ಎಂದು ತಿಳಿಸಿದ್ದಾರೆ.

siddaramaiah

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಬಿಜೆಪಿ ವಿರೋಧವಿದೆ. ಟಿಪ್ಪು ಕ್ರೌರ್ಯದ ಸಂಕೇತ. ಟಿಪ್ಪು ಕನ್ನಡ ವಿರೋಧಿ ಧರ್ಮಾಂಧನ ಜಯಂತಿ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತೆ ಎಂದು ಎಚ್ಚರಿಕೆ ನೀಡಿದರು.

ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು. ಸಿದ್ದರಾಮಯ್ಯ ಸವಾಲು ಹಾಕಿ ಟಿಪ್ಪು ಜಯಂತಿ ಆಚರಿಸಿದ್ರು. ಜನರು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು. ಟಿಪ್ಪು ಜಯಂತಿ ಆಚರಿಸಿದ್ರೆ ರಾಜ್ಯಾದ್ಯಂತ ವಿರೋಧ ಎದುರಿಸಬೇಕಾಗುತ್ತೆ ಅಂತ ರಾಜ್ಯ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದಿದ್ದೇನೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ. ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ನಾಯಕರ ಹೆಸರು ಬೇಡ ಅಂತ ಉಡುಪಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ ಎಂದರು.

KOTA SRINIVASA

ಪ್ರಕಾಶ್ ರೈ ವಿರುದ್ಧ ಗುಡುಗು:
ಇದೇ ಸಂದರ್ಭದಲ್ಲಿ ಅಯ್ಯಪ್ಪ ದೇವರೇ ಅಲ್ಲ ಅಂತ ಹೇಳಿಕೆ ನೀಡಿದ ಪ್ರಕಾಶ್ ರೈ ವಿರುದ್ಧ ಗುಡುಗಿದ ಅವರು, ಪ್ರಕಾಶ್ ರೈ ಗೌರಿಯ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಗೌರಿಯ ಹತ್ಯೆ ಬಗ್ಗೆ ನಮಗೆಲ್ಲ ನೋವಿದೆ. ಯಾವ ಹಿಂಸೆಯನ್ನೂ ಸಹಿಸಲು ನಮಗೆ ಸಾಧ್ಯವಿಲ್ಲ. ಗೌರಿ ಹಿಂದೂ ಧರ್ಮ ಧರ್ಮವೇ ಅಲ್ಲ ಅಂದಿದ್ಳು. ಹಿಂದೂ ದೇವರು ದೇವರೇ ಅಲ್ಲ ಅಂದಿದ್ದಳು. ಆ ಮಾನಸಿಕತೆಯಿಂದ ಪ್ರಕಾಶ್ ರೈ ಹೊರ ಬಂದಿಲ್ಲ ಅನ್ನೋದೇ ದುಃಖದ ವಿಚಾರ ಅಂದ್ರು.

ಬುದ್ಧಿಜೀವಿಗಳು, ನಗರ ನಕ್ಸಲರ ಮಾತಿಗೆ ಅವರೇ ಸ್ಪಷ್ಟನೆ ಕೊಡಬೇಕು. ಇತರ ಧರ್ಮಗಳ ವಿಚಾರವನ್ನು ಆಯಾ ಧರ್ಮಗಳು ನಿರ್ಧರಿಸುತ್ತದೆ. ಹಿಂದೂ ಧರ್ಮದ ವಿಚಾರದಲ್ಲಿ ನ್ಯಾಯಾಲಯ, ಸರ್ಕಾರ ಹಸ್ತಕ್ಷೇಪ ಮಾಡುತ್ತದೆ. ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು. ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿದ ನಂತರವೂ ಪಿಣರಾಯಿ ವಿಜಯನ್ ವರ್ತನೆ ಸರಿಯಾಗಿಲ್ಲ. ನಂಬಿಕೆಯ ಮೇಲಿನ ಬಲಾತ್ಕಾರ, ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಅಂತ ಅವರು ಹೇಳಿದ್ರು.

HDK 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *