ಮುಂಬೈ: ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದ ಪರಿಣಾಮ 4ನೇ ಏಕದಿನ ಪಂದ್ಯದಲ್ಲಿ ಭಾರತ ವಿಂಡೀಸ್ ಗೆ 378 ರನ್ ಗಳ ಕಠಿಣ ಗುರಿಯನ್ನು ಭಾರತ ನೀಡಿದೆ.
40 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿದ್ದ ಭಾರತ ರನ್ ಏರಿಕೆಯಾಗಲು ಕಾರಣವಾಗಿದ್ದು ರೋಹಿತ್ ಶರ್ಮಾ ಮತ್ತು ಅಂಬಾಟಿ ರಾಯುಡು ಬಿರುಸಿನ ಬ್ಯಾಟಿಂಗ್. 60 ಎಸೆತಗಳಲ್ಲಿ ಅರ್ಧಶತಕ, 98 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ರೋಹಿತ್ ಅಂತಿಮವಾಗಿ 162 ರನ್(137 ಎಸೆತ, 20 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು. 51 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಂಬಾಟಿ ರಾಯುಡು 100 ರನ್(81 ಎಸೆತ, 8 ಬೌಂಡರಿ, 4 ಸಿಕ್ಸರ್) ರನೌಟ್ ಆದರು. ಇವರಿಬ್ಬರು ಮೂರನೇ ವಿಕೆಟಿಗೆ 211 ರನ್ ಜೊತೆಯಾಟವಾಡಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿತು.
ಶಿಖರ್ ಧವನ್ 38 ರನ್, ಕೊಹ್ಲಿ 16 ರನ್, ಧೋನಿ 23 ರನ್, ಜಾಧವ್ ಔಟಾಗದೇ 16 ರನ್, ರವೀಂದ್ರ ಜಡೇಜಾ ಔಟಾಗದೇ 7 ರನ್ ಹೊಡೆದರು. ಉತ್ತಮ ಆಟದಿಂದಾಗಿ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿತು.
ಭಾರತದ ರನ್ ಏರಿದ್ದು ಹೀಗೆ
50 ರನ್ – 7.6 ಓವರ್
100 ರನ್ – 16.2 ಓವರ್
150 ರನ್ – 26.3 ಓವರ್
200 ರನ್ – 33.1 ಓವರ್
250 ರನ್ – 38.4 ಓವರ್
300 ರನ್ – 42.4 ಓವರ್
350 ರನ್ – 47.6 ಓವರ್
377 ರನ್ – 50 ಓವರ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv