6 ಮಂದಿ ಮೇಲೆ ನಿಂತಿದೆ ನಟ ಅರ್ಜುನ್ ಹಣೆಬರಹ!

Public TV
3 Min Read
Sruthi Arjun

ಬೆಂಗಳೂರು: ವಿಸ್ಮಯ ಚಿತ್ರದ ಶೂಟಿಂಗ್ ಸೆಟ್‍ನಲ್ಲಿದ್ದ 5 ಮಂದಿ ಮತ್ತು ಶೃತಿ ಹರಿಹರನ್ ಗೆಳತಿ ನೀಡುವ ಹೇಳಿಕೆಯ ಮೇಲೆ ನಟ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ.

ಹೌದು. ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಗೆ 6 ಮಂದಿಯನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಆ ಸಾಕ್ಷಿ ಬೇರೆ ಯಾರೂ ಅಲ್ಲ, ವಿಸ್ಮಯ ಸಿನಿಮಾದ ನಿರ್ದೇಶಕ ಅರುಣ್ ವೈದ್ಯನಾಥನ್, ಸಹಾಯಕ ನಿರ್ದೇಶಕ ಭರತ್ ನೀಲಕಂಠ, ಮೋನಿಕಾ, ಶೃತಿ ಹರಿಹರನ್ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಹಾಗೂ ಗೆಳತಿ ಯಶಸ್ವಿನಿ.

SARJA SHRUTI

ವಿಸ್ಮಯ ಸಿನಿಮಾದಲ್ಲಿ ಏನಾಯಿತು?:
ಬೆಂಗಳೂರಿನ ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೆಳಗ್ಗೆ 7.30ರಿಂದ ಸಂಜೆ 6 ಗಂಟೆವರೆಗೆ ವಿಸ್ಮಯ ಶೂಟಿಂಗ್ ಸೆಟ್ ಹಾಕಲಾಗಿತ್ತು. ಈ ವೇಳೆ ಅರ್ಜುನ್ ಸರ್ಜಾ ವರ್ತನೆಯಿಂದ ನನಗೆ ಶಾಕ್ ಆಗಿತ್ತು. ಸ್ಕ್ರಿಪ್ಟ್ ಪ್ರಕಾರ ಸಣ್ಣದೊಂದು ಡೈಲಾಗ್‍ಗೆ ನನ್ನನ್ನು ಅರ್ಜುನ್ ಸರ್ಜಾ ಅಪ್ಪಿಕೊಳ್ಳಬೇಕಿತ್ತು. ಆದರೆ ಸೀನ್ ಬಳಿಕ ರಿಹರ್ಸಲ್ ಮಾಡುವಂತೆ ನಿರ್ದೇಶಕ ಅರುಣ್ ವೈದ್ಯನಾಥನ್ ತಿಳಿಸಿದ್ದರು. ಆ ರಿಹರ್ಸಲ್ ವೇಳೆ ಕಾಮದಾಹ ಏರಿ ಅರ್ಜುನ್ ಸರ್ಜಾ ವರ್ತಿಸಲು ಶುರು ಮಾಡಿದ್ದರು. ನನ್ನ ಪೃಷ್ಠ ಕೈ ಹಾಕಿ, ನಿಧಾನವಾಗಿ ಬ್ರಾ ಬಳಿಗೆ ಕೈ ತಂದಿದ್ದರು. ಅಷ್ಟಕ್ಕೆ ಸುಮ್ಮನಾಗದ ಅವರು ಕೆಳಭಾಗದಲ್ಲಿ ನನ್ನನ್ನು ಸವರಿದರು, ಬಳಿಕ ನನ್ನ ತೊಡೆವರೆಗೂ ಕೈ ತಂದರು. ಆ ಕ್ಷಣ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ ಎಂದು ಶೃತಿ ಹರಿಹರನ್ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

Sruthi Hariharan

ಆ ಶಾಕ್‍ನಿಂದ ಸುಧಾರಿಸಿಕೊಳ್ಳುವುದಕ್ಕೂ ಮೊದಲೇ ನನ್ನನ್ನ ಮತ್ತೆ ಬರಸೆಳೆದು ಅರ್ಜುನ್ ಅಪ್ಪಿದರು. ನನ್ನ ಹಿಂಭಾಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಡೈರೆಕ್ಟರ್ ಕಡೆಗೆ ತಿರುಗಿ ಮಾತಾಡಿದ ಅರ್ಜುನ್ ಸರ್ಜಾ, “ಈ ರೀತಿ ಸೀನ್ ಇಂಪ್ರೂ ಮಾಡಬಹುದಲ್ಲಾ” ಅಂತ ಡೈಲಾಗ್ ಹೊಡೆದರು. ಇದರಿಂದ ಕಸಿವಿಸಿಗೊಂಡ ನಾನು ತಕ್ಷಣವೇ ಡೈರೆಕ್ಟರ್‍ಗೆ ಹೇಳಿದೆ, “ಈ ರೀತಿಯಾದರೆ ನಾನು ಅಭಿನಯ ಮಾಡುವುದಕ್ಕೆ ಆಗಲ್ಲ” ಅಂತಾ ಹೇಳಿ ಅಲ್ಲಿಂದ ಕಾರವಾನ್(ಶೂಟಿಂಗ್ ಸಮಯದಲ್ಲಿ ಡ್ರೆಸ್/ ಮೇಕಪ್ ಮಾಡಲು ಇರುವ ವಾಹನ) ಬಳಿ ಹೋದೆ. ಅಲ್ಲಿ ಅರ್ಜುನ್ ಸರ್ಜಾರ ಕಿರುಕುಳ ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟೆ. ಆಗ ನನ್ನ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ಸಮಾಧಾನ ಮಾಡಿದರು.

Sruthi Arjun 2

ಇತ್ತ ನಟ ಅರ್ಜುನ್ ಸರ್ಜಾ ನನ್ನ ಮಾನಭಂಗ ಮಾಡಲೇಬೇಕು ಅಂತ ಫಿಕ್ಸ್ ಆಗಿದ್ದರು. ಒಂದು ಸೀನ್‍ನಲ್ಲಿ ಅರ್ಜುನ್ ಸರ್ಜಾ- ನಾನು ಬೆಡ್‍ನಲ್ಲಿ ಒಟ್ಟಿಗೆ ಮಲಗಬೇಕಿತ್ತು. ಇದನ್ನೇ ಲಾಭ ಮಾಡಿಕೊಂಡ ಅರ್ಜುನ್ ನನ್ನ ಹಿಡಿದು ಎಳೆದು ಬಲವಂತವಾಗಿ ಅಪ್ಪಿಕೊಂಡರು. ಆದರೆ ನಾನು ಅವರನ್ನು ತಳ್ಳಿದೆ. ಸೀನ್ ಮುಗಿದ ತಕ್ಷಣ ಸೆಟ್‍ನಿಂದ ಹೊರಬಂದೆ. ಪದೇ ಪದೇ ಅರ್ಜುನ್ ಸರ್ಜಾ ಅವರಿಂದ ಆಗುತ್ತಿದ್ದ ಮಾನಭಂಗ ಯತ್ನದಿಂದ ನನಗೆ ಶಾಕ್ ಆಗಿತ್ತು. ಇದೆಲ್ಲವನ್ನು ಸಹಾಯಕ ನಿರ್ದೇಶಕ ಭರತ್ ನೀಲಕಂಠ ಮತ್ತು ಮೋನಿಕಾ ಬಳಿಕ ಹೇಳಿ ಕಣ್ಣೀರಿಟ್ಟಿದ್ದೆ. ಹೀಗಾಗಿ ರಿಹರ್ಸಲ್ ಬೇಡ, ಓನ್ಲಿ ಟೇಕ್ ಎನ್ನುವ ನಿರ್ಧಾರವಾಯಿತು. ಇದನ್ನು ಓದಿ: ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

ಅಷ್ಟಕ್ಕೆ ಸುಮ್ಮನಾಗದ ಅರ್ಜುನ್ ಸರ್ಜಾ ದೇವನಹಳ್ಳಿ ಸಿಗ್ನಲ್‍ನಲ್ಲಿ ನನ್ನ ಕಾರು ಬಳಿ ತಮ್ಮ ಕಾರ್ ನಿಲ್ಲಿಸಿ, ಗ್ಲಾಸ್ ಇಳಿಸಿ, ಇವತ್ತು ನನ್ನ ರೂಂನಲ್ಲಿ ಯಾರೂ ಇಲ್ಲ. ರೆಸಾರ್ಟ್‍ಗೆ ಬಾ. ನಾವಿಬ್ಬರೂ ಖುಷಿಪಡೋಣ. ನಾನು ಪದೇ ಪದೇ ಕೇಳುತ್ತಿದ್ದರೂ ನೀನು ಆಗಲ್ಲ ಅಂತ ಹೇಳುತ್ತಿರುವೆ ಎಂದು ಸೆಕ್ಸಿ ಡೈಲಾಗ್ ಅನ್ನು ಹೊಡೆದಿದ್ದರು. ದೇವನಹಳ್ಳಿ ಸಿಗ್ನಲ್‍ನಲ್ಲಿ ಆ ಘಟನೆ ನಡೆದಾಗ ನನ್ನ ಕಾರಲ್ಲಿ ಜೊತೆಗೆ ಬೋರೇಗೌಡ, ಕಿರಣ್ ಇದ್ದರು.

Sruthi Arjun ff

`ವಿಸ್ಮಯ’ ಶೂಟಿಂಗ್ ದಿನಗಳಲ್ಲಿ ನನಗಾದ ನೋವಿನ ಬಗ್ಗೆ ಗೆಳತಿ ಯಶಸ್ವಿನಿ ಜೊತೆಗೆ ಹೇಳಿಕೊಂಡಿದ್ದೆ. ಅರ್ಜುನ್ ಸರ್ಜಾರಂತಹ ವ್ಯಕ್ತಿ ಜೊತೆಗೆ ಕೆಲಸ ಮಾಡುವುದಕ್ಕೆ ಆಗಲ್ಲ ಎಂದಿದ್ದೆ. ರಿಹರ್ಸಲ್ ಹೆಸರಲ್ಲಿ ನನ್ನ ಮಾನಭಂಗಕ್ಕೆ ಯತ್ನಿಸಿದ್ದರಿಂದ ನನಗೆ ಶಾಕ್ ಆಗಿತ್ತು. ಆದರೆ ಅರ್ಜುನ್ ಸರ್ಜಾ ದೊಡ್ಡ ನಟ, ಇಡೀ ಸಿನಿಮಾ ಇಂಡಸ್ಟ್ರಿಯವರು ಅವರೊಂದಿಗಿದ್ದಾರೆ. ನೀನು ದೂರು ಕೊಟ್ಟರೂ ಏನೂ ಆಗಲ್ಲ ಅಂತಾ ಗೆಳತಿ ಯಶಸ್ವಿನಿ ತಿಳಿಸಿದ್ದಳು ಎಂದು ಶೃತಿ ಹರಿಹರನ್ ಹೇಳಿದ್ದಾರೆ. ಇದನ್ನು ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/BDCc_WfjHeI

Share This Article
Leave a Comment

Leave a Reply

Your email address will not be published. Required fields are marked *