ಚಿಕ್ಕಮಗಳೂರು: ಇಂದು ನಡೆಯಲಿರುವ ದತ್ತಮಾಲಾ ಅಭಿಯಾನದ ಬಂದೋಬಸ್ತ್ ನೋಡಲು ತೆರಳುತ್ತಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಕಾರು ಅಪಘಾತಕ್ಕೀಡಾಗಿದೆ.
ಡಿಸಿ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಡಿಸಿ ಕಾರಿನ ಬಂಪರ್ ಹಾಗೂ ಇಂಡಿಕೇಟರ್ ಲೈಟ್ ಪುಡಿಪುಡಿಯಾಗಿದೆ. ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗದಲ್ಲಿ ದತ್ತಪೀಠಕ್ಕೆ ಹೋಗುತ್ತಿದ್ದರು.
ಈ ವೇಳೆ ಚನ್ನಗೊಂಡನಹಳ್ಳಿ ಕ್ರಾಸ್ ಬಳಿ ಹಾಸನ ಮೂಲದ ಫೋರ್ಡ್ ಐಕಾನ್ ಕಾರು ಹಾಗೂ ಡಿಸಿ ಕಾರು ಡಿಕ್ಕಿಯಾಗಿದೆ. ಅದೃಷ್ಟವಶಾತ್ ಜಿಲ್ಲಾಧಿಕಾರಿ ಅಪಾಯದಿಂದ ಪಾರಾಗಿದ್ದಾರೆ. ಹಾಸನದಿಂದ ನಾಲ್ವರು ಯುವಕರು ಚಿಕ್ಕಮಗಳೂರಿಗೆಂದು ಪ್ರವಾಸಕ್ಕೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಈ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv