ಭಾರೀ ಅಬ್ಬರದೊಂದಿಗೆ ತೆರೆ ಕಂಡಿರುವ ದಿ ವಿಲನ್ ಚಿತ್ರ ಈಗಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲಿಯೂ ಕೂಡಾ ದಾಖಲೆಯನ್ನೇ ಮಾಡುತ್ತಿದೆ. ಹೀಗಿದ್ದರೂ ಕೆಲ ಮಂದಿ ಈ ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಸಿಡಿಮಿಡಿಗೊಂಡು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರೋ ಬರಹವೊಂದೀಗ ರವಿಚಂದ್ರನ್ ಅಭಿಮಾನಿಗಳು ಸಿಟ್ಟಾಗುವಂತೆ ಮಾಡಿದೆ.
ತನ್ನ ಪತಿ ಪ್ರೇಮ್ ವಿರುದ್ಧ ಕಮೆಂಟ್ ಮಾಡುತ್ತಿರುವವರ ವಿರುದ್ಧ ರಕ್ಷಿತಾ ಪತ್ರವೊಂದನ್ನು ಪೋಸ್ಟ್ ಮಾಡೋ ಮೂಲಕ ಟಾಂಗ್ ಕೊಟ್ಟಿದ್ದಾರೆ. ಈ ಪತ್ರದಲ್ಲಿ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ. ರವಿಚಂದ್ರನ್ ಅವರಿಗೆ ತಂದೆಯ ಶ್ರೀಮಂತ ಹಿನ್ನೆಲೆ ಸಾಥ್ ನೀಡಿತ್ತು. ನಾದಬ್ರಹ್ಮ ಹಂಸಲೇಖಾ ಅವರಂಥಾ ಮಹನೀಯರು ಜೊತೆಗಿದ್ದರು. ಆ ಪ್ರೇಮಲೋಕ ಮತ್ತು ಇತ್ತೀಚೆಗೆ ತೆರೆ ಕಂಡಿದ್ದ ಟಗರು ಚಿತ್ರದಲ್ಲಿಯೂ ಕಥೆ ಇರಲಿಲ್ಲ. ಆದರೂ ಅವುಗಳನ್ನು ಜನ ನೋಡಿಲ್ವಾ? ಗೆಲ್ಲಿಸಿಲ್ವಾ ಎಂಬರ್ಥದಲ್ಲಿ ರಕ್ಷಿತಾ ಬರೆದುಕೊಂಡಿದ್ದರು.
https://www.facebook.com/raks5/posts/10210116243822635
ಪ್ರೇಮಲೋಕದಲ್ಲಿ ಕಥೆ ಇಲ್ಲ ಅಂತ ಟಾರ್ಗೆಟ್ ಮಾಡಿರೋದರ ವಿರುದ್ಧ ರವಿಚಂದ್ರನ್ ಅಭಿಮಾನಿಗಳೀಗ ಕೆಂಡ ಕಾರಲಾರಂಭಿಸಿದ್ದಾರೆ. ಪ್ರೇಮಲೋಕ ಸಿನಿಮಾ ಅರ್ಥವಾಗದಿದ್ದರೆ ಇನ್ನೊಂದು ಸಲ ನೋಡಿ ಅರ್ಥ ಮಾಡಿಕೊಳ್ಳಿ. ತಂತ್ರಜ್ಞಾನ ಕುಂಟುತ್ತಿದ್ದ ಕಾಲದಲ್ಲಿಯೇ ಇಡೀ ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಪ್ರೇಮಲೋಕ. ಅಂಥಾ ಚಿತ್ರದಲ್ಲಿ ಕಥೆ ಇಲ್ಲ ಅಂತ ಹೇಳಬೇಡಿ ಅಂತ ಕನಸುಗಾರನ ಅಭಿಮಾನಿಗಳು ರಕ್ಷಿತಾ ಪ್ರೇಮ್ಗೆ ತಿರುಗೇಟು ನೀಡಿದ್ದಾರೆ.
ಈ ಪತ್ರವನ್ನು ರಕ್ಷಿತಾ ಅವರೇ ಬರೆದರಾ? ಅವರೇಕೆ ಕನಸುಗಾರನ ಚಿತ್ರವನ್ನು ಟಾರ್ಗೆಟ್ ಮಾಡಿದರೆಂಬ ಪ್ರಶ್ನೆ ಇದ್ದೇ ಇದೆ. ಆದರೆ ಆ ಪತ್ರದಲ್ಲಿ ಪ್ರೇಮಲೋಕ ಚಿತ್ರದ ಬಗ್ಗೆ ಉಲ್ಲೇಖವಾಗಿರೋದರ ವಿರುದ್ಧ ಮಾತ್ರ ರವಿಚಂದ್ರನ್ ಅಭಿಮಾನಿಗಳು ಕುದ್ದು ಹೋಗಿದ್ದಾರೆ! ಇದನ್ನು ಓದಿ: ಪ್ರೇಮ್ ಕಾಲೆಳೆದವರಿಗೆ ಮಾತಿನಲ್ಲೇ ಚಾಟಿ ಬೀಸಿದ ರಕ್ಷಿತಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv