ಧೋನಿಯನ್ನು ತಂಡದಿಂದ ಕೈಬಿಡಿ ಎಂದವರಿಗೆ ಎಬಿಡಿ ಖಡಕ್ ಮಾತು

Public TV
1 Min Read
DHONI ABD

ಮುಂಬೈ: ಧೋನಿಗೆ 80 ವರ್ಷ ವಯಸ್ಸಾದ್ರೂ ಅವರು ನನ್ನ ತಂಡದ ಶಾಶ್ವತ ಸದಸ್ಯರಾರುತ್ತಾರೆ ಎಂದು ಹೇಳುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ತಂಡದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದ ಮಂದಿಗೆ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಖಡಕ್ ಉತ್ತರ ನೀಡಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಧೋನಿ ಅವರನ್ನು ತಂಡದಿಂದ ಕೈ ಬಿಡುವ ಕುರಿತು ಪ್ರಶ್ನೆಗೆ ಕೇಳುತ್ತಿದಂತೆ ಪತ್ರಕರ್ತರತ್ತ ನೋಡಿ ನಗೆ ಬೀರಿದ ಎಬಿಡಿ, ಧೋನಿ ಅವರಿಗೆ 80 ವರ್ಷ ವಯಸ್ಸಾಗಿ, ವಿಲ್‍ಚೇರ್ ಮೇಲಿದ್ದರೂ ನನ್ನ ತಂಡದಲ್ಲಿ ಕಾಯಂ ಸ್ಥಾನ ನೀಡುತ್ತೇನೆ. ಧೋನಿ ತಂಡದ ಗೆಲುವಿಗಾಗಿ ಆಡುತ್ತಾರೆ ಎಂಬ ವಿಶ್ವಾಸ ನೀಡುತ್ತೇನೆ. ಅವರ ದಾಖಲೆಗಳು ನೋಡಿದರೆ ಎಲ್ಲವೂ ಆರ್ಥವಾಗುತ್ತದೆ. ಅಂತಹ ಆಟಗಾರರನ್ನು ತಂಡದಿಂದ ಡ್ರಾಪ್ ಮಾಡುತ್ತಾರಾ ಎಂದು ಮರು ಪ್ರಶ್ನೆ ಮಾಡಿದರು.

abd

ಇತ್ತೀಚೆಗೆ ಧೋನಿ ಅವರು ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿರುವ ಹಿನ್ನೆಲೆಯಲ್ಲಿ ತಂಡದಿಂದ ಅವರನ್ನು ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ ಎಂಬ ಅಭಿಪ್ರಾಯ ಕ್ರಿಕೆಟ್ ವಿಶ್ಲೇಷಕರಿಂದ ಕೇಳಿಬಂದಿತ್ತು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಲ್ಲಿ ಧೋನಿ ಆಡುತ್ತಿದ್ದು, ತಮ್ಮ ವಿರುದ್ಧ ಟೀಕೆಗಳಿಗೆ ಟೂರ್ನಿಯಲ್ಲಿ ಬ್ಯಾಟ್ ಮೂಲಕವೇ ಉತ್ತರ ನೀಡುತ್ತರಾ ಎನ್ನುವುದನ್ನು ಕಾದುನೋಡಬೇಕಿದೆ.

ಟೀಂ ಇಂಡಿಯಾ ನಾಯಕತ್ವ ವಹಿಸಿ ವಿಶ್ವ ಕ್ರಿಕೆಟ್‍ನ ಪ್ರಮುಖ ಟೂರ್ನಿಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಗರಿಮೆ ಧೋನಿ ಅವರಿಗೆ ಸಲ್ಲುತ್ತದೆ. 2017ರಲ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದು ಕೊಹ್ಲಿ ಅವರಿಗೆ ನಾಯಕತ್ವ ವಹಿಸಿದ್ದರು. ಧೋನಿ ಆಡಿರುವ ಇತ್ತೀಚಿನ 9 ಪಂದ್ಯಗಳಲ್ಲಿ ಕೇವಲ 156 ರನ್ ಮಾತ್ರ ಗಳಿಸಿದ್ದಾರೆ. ಆದರೆ ಸ್ಟಂಪ್ ಹಿಂದೆ ತಂಡಕ್ಕೆ ಬಲ ನೀಡುತ್ತಿರುವ ಧೋನಿ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/cricrohit1/status/1053721494079979520

Share This Article
Leave a Comment

Leave a Reply

Your email address will not be published. Required fields are marked *