ಕಲಬುರಗಿ: ಅಮೃತಸರನಲ್ಲಿ ನಡೆದ ರೈಲ್ವೇ ದುರಂತಕ್ಕೆ ರೈಲ್ವೇ ಇಲಾಖೆ ಹಾಗೂ ರೈಲ್ವೇ ಪೊಲೀಸರ ನಿರ್ಲಕ್ಷತನ ಕಾರಣ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಜೆ ಆರೋಪಿಸಿದ್ದಾರೆ. ಅಲ್ಲದೇ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೃತಸರದಲ್ಲಿ ಸಂಭವಿಸಿದ ರೈಲು ದುರಂತ ದೊಡ್ಡ ಶಾಕ್ ನೀಡಿದೆ. ರೈಲ್ವೇ ಹಳಿ ಸಮೀಪ, ನಿಲ್ದಾಣ ಬಳಿ ಸಾರ್ವಜನಿಕ ಕಾರ್ಯಕ್ರಮ ಮಾಡುವಾಗ ಎಚ್ಚರಿಕೆ ವಹಿಸಬೇಕಿತ್ತು. ದುರಂತಕ್ಕೆ ರೈಲ್ವೇ ಇಲಾಖೆ ಹಾಗೂ ರೈಲ್ವೇ ಪೊಲೀಸರ ನಿರ್ಲಕ್ಷತನ ಕಾರಣವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಲೋಕಸಭಾ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಜೆ ಆರೋಪಿಸಿದ್ದಾರೆ.
ಇದೇ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಖರ್ಗೆ ಅವರು, ಧರ್ಮದ ಕುರಿತು ನಿರ್ಣಯ ಮಾಡುವ ಸರ್ಕಾರದಲ್ಲಿ ನಾನು ಇರರಲಿಲ್ಲ, ಆ ಕುರಿತು ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ರಾಜಕೀಯದಲ್ಲಿ ಧಾರ್ಮಿಕ ವಿಚಾರ ಮಾತಾಡಲು ನಾನು ಹೋಗಲಾರೆ. ಆದರೆ ಚುನಾವಣೆಗೆ ಹೋಗುವಾಗ ವೇಳೆ ಈ ಮಾತುಗಳು ಅಗತ್ಯವಿಲ್ಲ. ಜನರ ಬಳಿ ಪಕ್ಷದ ಪ್ರಣಾಳಿಕೆ ಮೇಲೆ ನಾವು ಮತ ಕೇಳುತ್ತೇವೆ. ಧರ್ಮದ ಬಗ್ಗೆ ಬೇಕಾದರೆ ಧಾರ್ಮಿಕ ಸಂವಾದಕ್ಕೆ ಕರೆಯಲಿ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಓದಿ: ಸರಾ ದುರಂತ: ನೋಡ ನೋಡುತ್ತಲೇ 50 ಮಂದಿ ರೈಲಿಗೆ ಬಲಿ!
ಉಳಿದಂತೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ ಹೇಳಿದ ಪ್ರಕಾರ ನಾವೆಲ್ಲರೂ ನಡೆದುಕೊಳ್ಳಬೇಕು. ನಮ್ಮ ಹಕ್ಕು ಮೊಟಕುಗೊಂಡಾಗ ನಾವು ನ್ಯಾಯಾಲಯ ಮೊರೆ ಹೋಗುತ್ತೇವೆ. ಈ ದೇಶದ ಸಂವಿಧಾನ ಶ್ರೇಷ್ಠ, ಸಂವಿಧಾನ ಹೇಳಿದ ಹಾಗೇ ನಾವು ನಡೆದುಕೊಳ್ಳಬೇಕು. ಈ ವಿಚಾರವಾಗಿ ನಾನು ರಾಜಕೀಯ ಮಾಡಲ್ಲ. ಯಾವುದು ಸಮಾಜಕ್ಕೆ ಒಳ್ಳೆಯದಾಗಲ್ಲವೋ ಅದನ್ನು ತಿರಸ್ಕಾರ ಮಾಡುವುದನ್ನು ಕಲಿಯಬೇಕು ಎಂದರು.
#WATCH The moment when the DMU train 74943 stuck people watching Dussehra celebrations in Choura Bazar near #Amritsar (Source:Mobile footage-Unverified) pic.twitter.com/cmX0Tq2pFE
— ANI (@ANI) October 19, 2018