‘ಒಡೆಯ’ನಿಗಾಗಿ ಮಿನಿ ಸ್ಕಾಟ್ಲೆಂಡ್‍ನಿಂದ ಹಾರಿ ಬಂದ ಕನ್ನಡದ ಒಡತಿ!

Public TV
1 Min Read
ODEYA

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ `ಒಡೆಯ’. ಈ ಸಿನಿಮಾದ ಟೈಟಲ್ ಕಾಂಟ್ರವರ್ಸಿಯಿಂದ ಬಜಾರ್ ಲ್ಲಿ ಹವಾ ಎಬ್ಬಿಸಿತ್ತು. ಇದೀಗ ನಾಯಕಿ ಆಯ್ಕೆ ವಿಚಾರವಾಗಿ ಸುದ್ದಿಯಲ್ಲಿದೆ. ಕನ್ನಡತಿಯೇ ಬೇಕು ಅಂತ ಹಠಹಿಡಿದ ಚಿತ್ರತಂಡಕ್ಕೆ ಬೊಂಬೆಯಂತಹ ಬೆಡಗಿ ಸಿಕ್ಕಿದ್ದಾಳೆ.

ಒಡೆಯ ಸಿನಿಮಾದ ಮೂಲಕ ಮತ್ತೊಬ್ಬ ಕನ್ನಡತಿಯನ್ನ ಪರಿಚಯಿಸಬೇಕು ಅನ್ನೋದು ಚಿತ್ರತಂಡದ ಮಹದಾಸೆಯಾಗಿತ್ತು. ಹೀಗಾಗಿ ಇಡೀ ಒಡೆಯ ಚಿತ್ರತಂಡ ಕನ್ನಡದ ಹುಡುಗಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದರು. ಅದರಂತೇ ಕನ್ನಡದ ಹೊಸ ಪ್ರತಿಭೆಗಳಿಗೆ ಮಣೆಹಾಕಿದ್ದರು. ಸಾಕಷ್ಟು ಜನ ನ್ಯೂ ಕಮ್ಮರ್  ಗಳು ಒಡೆಯ ಚಿತ್ರತಂಡವನ್ನ ಸಂಪರ್ಕ ಕೂಡ ಮಾಡಿದ್ದರು. ಆದರೆ ಸಾರಥಿಯ ಜತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಕೊಡಗಿನ ಕಿನ್ನರಿಗೆ ಸಿಕ್ಕಿದೆ.

odeya copy

ಕೊಡಗಿನ ಬೆಡಗಿ ರಾಘವಿ ‘ಒಡೆಯ’ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಇವರು ಸಿನಿಮಾಗಾಗಿ ರಾಘವಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಒಡೆಯ ಸಿನಿಮಾದ ಫೋಟೋಶೂಟ್‍ನಲ್ಲಿ ರಾಘವಿ ಅವರು ಪಾಲ್ಗೊಳ್ಳಲಿದ್ದಾರೆ.

ಎಂ.ಡಿ.ಶ್ರೀಧರ್ ಹಾಗೂ ದರ್ಶನ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಮೂರನೇ ಸಿನಿಮಾ `ಒಡೆಯ’ ಆಗಿದೆ. ಒಡೆಯ ಸಿನಿಮಾಗೆ ನಟಿ ಮಾತ್ರವಲ್ಲ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕನ್ನಡದವರೇ ಆಗಿರಬೇಕು ಎಂದು ದರ್ಶನ್ ತಿಳಿಸಿದ್ದರು. ಹೀಗಾಗಿಯೇ ಕನ್ನಡ ನೆಲದ ಕಲಾವಿದರು- ತಂತ್ರಜ್ಞರನ್ನ ಆಯ್ಕೆ ಮಾಡಲಾಗುತ್ತಿದೆ.

odeya 2

ಈಗಾಗಲೇ, ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಪಂಕಜ್, ಯಶಸ್ ಸೂರ್ಯ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವರನ್ನ ಚಿತ್ರಕ್ಕೆ ಆಯ್ಕೆಮಾಡಲಾಗಿದೆ. ಸದ್ಯಕ್ಕೆ ಡಿಸೆಂಬರ್ ನಲ್ಲಿ ಒಡೆಯ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *