ಹುಲಿಯ ಬಾಯಿಗೆ ಕೈ ಹಾಕಿದ ಶ್ರೀರಾಮುಲು ಶೀಘ್ರವೇ ಜೈಲಿಗೆ: ಕೈ ಮುಖಂಡ ಆಂಜನೇಯಲು

Public TV
1 Min Read
SHRIRAMULU

ಬಳ್ಳಾರಿ: ಡಿಕೆ ಶಿವಕುಮಾರ್ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದ ನೀವೂ ಸಹ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ ಎಸ್ ಆಂಜನೇಯಲು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ-ರಾಮುಲು ಅಧಿಕಾರದಲ್ಲಿದ್ದಾಗ ಗಣಿಗಾರಿಕೆಯಲ್ಲಿ ಲೂಟಿ ಮಾಡಿದ್ದೂ ಜನರು ಮರೆತಿಲ್ಲ. ಶಾಸಕ ಶ್ರೀರಾಮುಲುಗೆ ಬಳ್ಳಾರಿ ಜನರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿ ಸ್ಫರ್ಧಿಸಿದರು ಎಂದು ಹೇಳಿದರು.

ಶ್ರೀರಾಮುಲು ಸಹ 27 ಎಕರೆ ಜಮೀನು ಕಬಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ನಿಮ್ಮ ವಿರುದ್ಧವೂ ಸಹ ಲೋಕಾಯುಕ್ತದಲ್ಲಿ ಕೇಸಿದೆ. ನೀವೂ ಸಹ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಹುಲಿಯ ಬಾಯಿಗೆ ಕೈ ಹಾಕುತ್ತಿದ್ದೀರಿ ಹುಷಾರ್ ಎಂದು ಶ್ರೀರಾಮುಲು ಅವರ ಮಾತಿಗೆ ತಿರುಗೇಟು ನೀಡಿದರು.

vlcsnap 2018 10 14 13h55m17s767

ಬಳ್ಳಾರಿ ಜನರನ್ನು ದಡ್ರು ಎಂದು ತಿಳಿದುಕೊಂಡಿದ್ದಿರಾ. ರಾಜ್ಯದಲ್ಲಿ ಮಂತ್ರಿಯಾಗಬೇಕಾದಾಗ ಮೊಳಕಾಲ್ಮೂರಿನಲ್ಲಿ ನಿಂತುಕೊಂಡಿದ್ದೀರಿ. ಕೇಂದ್ರದಲ್ಲಿ ಮಂತ್ರಿಯಾಗಬೇಕಾದ್ರೆ ಬಳ್ಳಾರಿಯಲ್ಲಿ ನಿಂತುಕೊಳ್ಳುತ್ತೀರಿ. ಬಳ್ಳಾರಿ ಜನರನ್ನು ಕೇವಲ ಮಂತ್ರಿಯಾಗುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದೀರಿ. ಬಳ್ಳಾರಿ ಜನರನ್ನು ಏನೆಂದು ತಿಳಿದುಕೊಂಡಿದ್ದೀರಿ? ಒಂದು ಬಾರಿ ಬಿಜೆಪಿಯಲ್ಲಿ ಅವಕಾಶ ನೀಡಿದ್ದಕ್ಕೆ ಅಕ್ರಮ ಗಣಿಗಾರಿಕೆ ಲೂಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.

ನಿಮಗೆ ತಾಕತ್ ಇದ್ದರೆ ನೀವು ನಾಗೇಂದ್ರ ವಿರುದ್ಧ ಸ್ಪರ್ಧೆ ಮಾಡಬೇಕಿತ್ತು. ಅದು ಬಿಟ್ಟು ಸೋಲುವ ಭಯದಿಂದ ಬೇರೆ ಕಡೆ ಸ್ಪರ್ಧೆ ಮಾಡಿದ್ರಿ. ನೀವೂ ರಾಜೀನಾಮೆ ನೀಡಿ ಬಂದು ನನ್ನ ವಿರುದ್ಧ ಗೆಲುವು ಸಾಧಿಸಿದರೆ ನಾನು ಬಳ್ಳಾರಿ ಬಿಟ್ಟೇ ಹೋಗುತ್ತೇನೆ. ಒಂದು ವೇಳೆ ನೀವು ಸೋತರೇ ಬಳ್ಳಾರಿ ಬಿಟ್ಟು ಹೋಗ್ತೀರಾ ಎಂದು ಆಂಜನೇಯಲು ಶ್ರೀರಾಮುಲುಗೆ ಸವಾಲು ಎಸೆದರು.

6603HI W02714RGK93QED2H3jpgjpg

ರಾಜೀನಾಮೆ ನೀಡಿ ಮೂರು ಬಾರಿ ಜನರಿಗೆ ಮೋಸ ಮಡಿದ ನೀವು ಬಳ್ಳಾರಿಗೆ ನೀಡಿದ ಕೊಡಗೆ ಏನು ಎನ್ನುವುದನ್ನು ತೋರಿಸಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *