ವಿಜಯಪುರ: ಹಾಡಹಗಲೇ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್‍ನ್ನು ಯುವಕನೊಬ್ಬ ಎಗರಿಸಿದ್ದಾನೆ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಯುವಕನ ಕೃತ್ಯ ಸೆರೆಯಾಗಿದೆ. ವಿಜಯಪುರ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇದೇ ತಿಂಗಳ 10ರಂದು ಘಟನೆ ನಡೆದಿದೆ. ಬೈಕ್ ಕಳ್ಳತನ ಮಾಡಿದ ಯುವಕ ಸ್ಥಳದಿಂದ ಗಾಂಭಿರ್ಯವಾಗಿಯೇ ಪರಾರಿಯಾಗಿದ್ದಾನೆ.
ಘಟನೆ ವಿವರ:
ನ್ಯಾಯಾಲಯದ ಆವರಣದಲ್ಲಿ ಸಾಲಾಗಿ ನಿಂತಿದ್ದ ಬೈಕ್‍ಗಳ ಬಳಿ ಬಂದ ಯುವಕನೊಬ್ಬ ಅನುಮಾನ ಬಾರದಂತೆ ನಿಂತಿರುತ್ತಾನೆ. ಬಳಿಕ ಅಲ್ಲಿಯೇ ಒಂದು ಬೈಕ್‍ಗೆ ತನ್ನ ಬಳಿ ಇರುವ ಕೀ ಹಾಕಿ ನೋಡುತ್ತಾನೆ. ಕೀ ಬರುತ್ತದೆ ಎನ್ನವುದನ್ನು ಖಚಿತ ಪಡೆಸಿಕೊಂಡು, ತನ್ನದೇ ಎನ್ನುವಂತೆ ಹೊರ ತೆಗೆಯುತ್ತಾನೆ. ಸುತ್ತಮುತ್ತ ನೋಡಿ, ಭಯದಿಂದಲೇ ಬೈಕ್ ಪ್ರಾರಂಭಿಸಿ ಅಲ್ಲಿಂದ ಕಾಲ್ಕಿಳ್ಳುತ್ತಾನೆ.
ಭೀಮಾತೀರದ ಹಂತಕ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ಬಳಿಕ ನ್ಯಾಯಾಲಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಿಂದ ಕಳ್ಳನ ಕೈಚಳಕದ ದೃಶ್ಯಗಳು ಸಿಕ್ಕಿವೆ. ಆದರೆ ನ್ಯಾಯಾಲಯ ಕೂಡ ಸುರಕ್ಷಿತವಾಗಿಲ್ಲ ಅಂತಾ ಸಾರ್ವಜನಿಕರು ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಾಲಕನ ಹಿಂದೆ ದೊಡ್ಡ ತಂಡವೇ ಇದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv