ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿ ಶ್ರೀ ಭವಿಷ್ಯ

Public TV
2 Min Read
MAHESH

ಮೈಸೂರು: ಸರ್ಕಾರ ಭವಿಷ್ಯದ ಬಗ್ಗೆ ಇನ್ನೂ ಇರಡು ತಿಂಗಳು ಕಾಯಿರಿ. ಮುಂದೆ ಏನು ಆಗುತ್ತೆ ಅಂತಾ ಕಾದು ನೋಡಿ ಅಂತ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮೈಸೂರಿನ ರಾಜಮನೆತನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸ್ಥಿರತೆ ಕಾಲದ ಬಗ್ಗೆ ಭವಿಷ್ಯ ನುಡಿದ್ರು. ಮಹೇಶ್ ರಾಜೀನಾಮೆ ಬೆನ್ನಲ್ಲೇ ಕೋಡಿಶ್ರೀ ಭವಿಷ್ಯ ನುಡಿದಿರೋದ್ರಿಂದ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಚಿವ ಎನ್.ಮಹೇಶ್ ರಾಜೀನಾಮೆ ನೀಡಲು ಕಾರಣ ಏನು?

KODI SREE

ಈ ಬಾರಿ ವರ್ಷಪೂರ್ತಿ ಮಳೆ ಹೆಚ್ಚಿರುತ್ತೆ. ಕಾರ್ತಿಕ ಮಾಸದಲ್ಲಿ ಇನ್ನೂ ಹೆಚ್ಚು ಮಳೆಯಾಗಲಿದೆ. ಶತ್ರು ಸಂಹಾರದ ಸಂಕೇತ ದಸರಾ ಆಗಿದೆ ಅಂದ್ರು. ಇದನ್ನೂ ಓದಿ: ಸಚಿವ ಮಹೇಶ್ ರಾಜೀನಾಮೆ – ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ: ಸಿಎಂ ಎಚ್‍ಡಿಕೆ

ರಾಜೀನಾಮೆ ಬಳಿಕ ಮಹೇಶ್ ಹೇಳಿದ್ದೇನು?:
ನಾನು ನನ್ನ ಕ್ಷೇತ್ರಗಳಿಗೆ ಭೇಟಿ ಆಗೋದಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇನೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದ ಮಾನ್ಯ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಮುಂದೆ ಸರ್ಕಾರದ ಭಾಗವಾಗಿ ಇರಲ್ಲ, ಕೇವಲ ಕುಮಾರಸ್ವಾಮಿ ನೇತೃತ್ವ ಸರ್ಕಾರದ ಬೆಂಬಲಿಗನಾಗಿ ಇರುತ್ತೇನೆ. ನನ್ನ ಸಂಪೂರ್ಣ ಬೆಂಬಲ ಕುಮಾರಸ್ವಾಮಿ ಅವರಿಗಿದ್ದು, ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎನ್ ಮಹೇಶ್ ತಿಳಿಸಿದ್ದರು. ಇದನ್ನೂ ಓದಿ: ಸಚಿವರ ರಾಜೀನಾಮೆಯನ್ನು ಅಂಗೀಕರಿಸ್ತಾರೋ, ಇಲ್ಲ ಮಾಯಾವತಿ ಜೊತೆ ಮಾತಾಡ್ತಾರೋ ಗೊತ್ತಿಲ್ಲ: ಎಚ್.ಡಿ.ರೇವಣ್ಣ

N Mahesh

ಕೆಲವು ದಿನಗಳ ಹಿಂದೆ ಎನ್.ಮಹೇಶ್, ಕಾಂಗ್ರೆಸ್ ವಿರುದ್ಧವೇ ಮಾತನಾಡಿದ್ದರು. ಮಹೇಶ್ ಹೇಳಿಕೆಗೆ ಸಹಜವಾಗಿಯೇ ಎಲ್ಲ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದರು. ಇದರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮಹಾಘಟಬಂಧನ್ ಗೆ ಬಿಎಸ್‍ಪಿ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ಜೊತೆ ಸೇರಿ ಕಾಂಗ್ರೆಸ್ ಮುನ್ನುಡಿ ಬರೆದಿತ್ತು. ಆದ್ರೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸಹ ಮಹಾಘಟಬಂಧನ್ ದಿಂದ ದೂರ ಉಳಿದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *