ಉಗಾಂಡ: ಆಕ್ಸ್‌ಫರ್ಡ್ ವಿದ್ಯಾರ್ಥಿನಿಯೊಬ್ಬಳು ವರನಿಲ್ಲದೇ ತನ್ನನ್ನು ತಾನೇ ಮದ್ವೆ ಮಾಡಿಕೊಂಡಿರುವ ಅಚ್ಚರಿಯ ಘಟನೆ ಉಗಾಂಡದಲ್ಲಿ ನಡೆದಿದೆ.
32 ವರ್ಷದ ಲುಲು ಜೆಮಿಮಾ ತನ್ನನ್ನು ತಾನೇ ವರಿಸಿಕೊಂಡ ವಧು. ಜೆಮಿಮಾ ಅಂತಿಮವಾಗಿ ಪೋಷಕರ ಒತ್ತಡದಿಂದ ಮದುವೆಯಾಗಲು ಒಪ್ಪಿಕೊಂಡರು. ಹಾಗಾಗಿ, ಆಗಸ್ಟ್ 27 ರಂದು ಉಗಾಂಡಾದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಲುಲು ಮದುವೆಯಲ್ಲಿ ಗೌನ್ ಧರಿಸಿದ್ದು, ಸಾಂಪ್ರದಾಯಿಕ ವಿವಾಹ ಸಮಾರಂಭದಂತೆ ಮದುವೆಯಾದರು. ಮದುವೆಗೆ ಇಷ್ಟವಿಲ್ಲದಿದ್ದರೂ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ, ತನ್ನೊಂದಿಗೆ ತಾನು ಮದುವೆಯಾಗಲು ನಿಶ್ಚಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಲುಲು ಜೆಮಿಯಾ, 16 ವರ್ಷದಿಂದಲೇ ಪೋಷಕರು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ ನನಗೆ ಇಷ್ಟವಿಲ್ಲದೇ ಇರುವುದರಿಂದ, ಮುಂದೂಡುತ್ತಾ ಬಂದಿದ್ದೆ. ಆದರೆ ಈಗ ಒತ್ತಡ ಹೆಚ್ಚಾಗಿದ್ದರಿಂದ, ನನ್ನ ಮದುವೆಯನ್ನು ನನ್ನೊಂದಿಗೆ ನಿಶ್ಚಯಿಸಿಕೊಂಡು ತಾನೇ ಮದುವೆ ಮಾಡಿಕೊಂಡಿದ್ದೇನೆ. ಈ ಬಗ್ಗೆ ಪೋಷಕರಿಬ್ಬರಿಗೂ ಬೇಸರವಿದ್ದು, ಅವರೊಂದಿಗೆ ಮಾತನಾಡಿ ಅವರನ್ನು ಸಮಾಧಾನ ಮಾಡುತ್ತೇನೆ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಮದುವೆಗೆ ಲುಲು ಜೆಮಿಯಾ ಕೇವಲ 2.62 ಡಾಲರ್(194.97 ರೂ.) ಖರ್ಚು ಮಾಡಿದ್ದಾಳೆ. ಜೆಮಿಯಾ ಸಹೋದರ ಮದುವೆಯ ಕೇಕ್ ನೀಡಿದ್ದು, ಸ್ನೇಹಿತೆ ವಧುವಿನ ಡ್ರೆಸ್‍ನ್ನು ಬಾಡಿಗೆಗೆ ನೀಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಖರ್ಚನ್ನು ತಾವೇ ನೀಡಿದ್ದಾರೆ ಎಂದು ಜೆಮಿಯಾ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv