ತುಮಕೂರು: ಮಕ್ಕಳಿಗಾಗಿ ಜೀವ ಸವೆಸಿದ ತಂದೆಯನ್ನು ಮಕ್ಕಳು ದೂರ ಮಾಡಿದ್ದಾರೆ. ಮಕ್ಕಳಿಂದ ದೂರವಾದ ವೃದ್ಧ ತಂದೆ ಚಕ್ರಪಾಣಿ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ವೃತ್ತಿಯಲ್ಲಿ ಅಡುಗೆಭಟ್ಟರಾಗಿದ್ದರು.
ಹೋಟೆಲ್ ಮದುವೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತಾ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 4 ವರ್ಷಗಳ ಹಿಂದೆ ಮುಂಬೈನಲ್ಲಿ ಕೆಲಸಕ್ಕೆ ಹೋಗಿದ್ದ ವೃದ್ಧ ಚಕ್ರಪಾಣಿ ಅವರಿಗೆ ಅಪಘಾತವಾಗಿದ್ದು, ಇವರ ಕಾಲು ಮುರಿದಿದೆ. ಮಕ್ಕಳು ಶೃಂಗೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿ, ಸಂಬಂಧವೇ ಇಲ್ಲದಂತೆ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.
ಬಂಧು ಬಳಗ ಮಕ್ಕಳು ಇದ್ದರೂ ಅನಾಥವಾಗಿರುವ ವೃದ್ಧ ಚಕ್ರಪಾಣಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲದೆ ಒಂದು ಹೊತ್ತಿನ ಊಟವೂ ಇಲ್ಲದೆ ನಿಸ್ಸಹಾಯಕರಾಗಿದ್ದಾರೆ. ಆದರೆ ಇವರ ದಯನೀಯ ಸ್ಥಿತಿಯನ್ನ ಕಂಡ ತುಮಕೂರಿನ ಸಹೃದಯಿಯೊಬ್ಬರು ಶೃಂಗೇರಿಗೆ ಹೋಗಿ ವೃದ್ಧ ಚಕ್ರಪಾಣಿ ಅವರನ್ನು ಕರೆದು ತಂದು ತಮ್ಮ ಮನೆಯಲ್ಲಿಯೇ ಊಟ ತಿಂಡಿ, ವಸ್ತ್ರ, ನೀಡಿ ಕಳೆದ 15 ದಿನಗಳಿಂದ ಸ್ವತಃ ಆರೈಕೆ ಮಾಡುತ್ತಿದ್ದಾರೆ.
ದಿನೇ ದಿನೇ ಚಕ್ರಪಾಣಿ ಅವರ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು ಶಸ್ತ್ರಚಿಕಿತ್ಸೆ ಅಗತ್ಯವಾಗಿ ಮಾಡಲೇಬೇಕಾಗಿದೆ. ಆದರೆ ಆರೈಕೆ ಮಾಡುತ್ತಿರುವ ಯುವಕನಿಗೆ ಅಷ್ಟು ಶಕ್ತಿ ಇಲ್ಲ. ಚಿಕಿತ್ಸೆಗೆ ಯಾರಾದರು ದಾನಿಗಳು ಸಹಾಯ ಮಾಡಿ, ಅನಾಥ ಶ್ರಮಕ್ಕೆ ಸೇರಿಸಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=ZGsdNPvdDZ8