ಮಗನ ಸಾವಿಗೆ ನ್ಯಾಯ ಸಿಗಲು ಮುಸ್ಲಿಂ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ!

Public TV
2 Min Read
UP MUSLIM FAMILY

ಲಕ್ನೋ: ಕುಟುಂಬದ ಸದಸ್ಯನ ಅಸಹಜ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಬಿಂಬಿಸಿದ್ದಕ್ಕೆ, ಮನನೊಂದ ಮುಸ್ಲಿಂ ಕುಟುಂಬವೊಂದು ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಉತ್ತರ ಪ್ರದೇಶದ ಭಾಗ್‍ಪತ್ ನಲ್ಲಿ ನಡೆದಿದೆ.

ಭಾಗ್‍ಪತ್ ಜಿಲ್ಲೆಯ ಭದ್ರಾರ್ಕಾ ಗ್ರಾಮದ ನಿವಾಸಿಯಾಗಿರುವ ಅಖ್ತರ್ ಹಾಗೂ ಅವರ 12 ಮಂದಿ ಕುಟುಂಬ ಸದಸ್ಯರು ಕೇಸರಿ ಪಟ್ಟಿಗಳನ್ನು ಹಣೆಗೆ ಕಟ್ಟಿಕೊಂಡು, ಜೈಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇವರನ್ನು ಸ್ಥಳೀಯ ಹಿಂದೂ ಪರ ಸಂಘಟನೆಯ ಸದಸ್ಯರು ತಿಲಕವಿಡುವ ಮೂಲಕ ಬರಮಾಡಿಕೊಂಡಿದ್ದಲ್ಲದೇ, ಅವರಿಂದ ಹೋಮ-ಹವನ ಹಾಗೂ ಹನುಮಾನ್ ಚಾಲೀಸಾವನ್ನು ಪಠಣಮಾಡಿಸಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಳಿಕ ತಮ್ಮ ಹೆಸರನ್ನು ಧರ್ಮಸಿಂಗ್ ಎಂದು ಅಖ್ತರ್ ನಾಮಕರಣ ಮಾಡಿಕೊಂಡಿದ್ದಾರೆ. ಅಲ್ಲದೇ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೂ ಸಹ ತಮ್ಮ ಧರ್ಮವನ್ನು ಬದಲಾಯಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಮತಾಂತರಗೊಳ್ಳಲು ಕಾರಣವೇನು?
ನನ್ನ ಮಗನಾಗಿದ್ದ 28 ವರ್ಷದ ಗುಲ್‍ಹಸನ್‍ರನ್ನು 2018 ರ ಜುಲೈ 28 ರಂದು ನವಡಾ ಗ್ರಾಮದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆ ಮಾಡಿದ್ದನ್ನು ಮರೆಮಾಚಿ ಆತ್ಮಹತ್ಯೆ ಎಂದು ಬಿಂಬಿಸಲು ಆತನ ಶವವನ್ನು ನೇಣಿಗೆ ಹಾಕಿದ್ದರು. ಶಂಕೆ ಹಿನ್ನೆಲೆಯಲ್ಲಿ ನಾನು ನಮ್ಮ ಸಮುದಾಯದ ನಾಲ್ವರ ವಿರುದ್ಧ ದೂರು ನೀಡಿದ್ದೆ. ಅಷ್ಟೇ ಅಲ್ಲದೇ ಪೊಲೀಸರು ಹಾಗೂ ನಮ್ಮ ಸಮುದಾಯದ ಮುಖ್ಯಸ್ಥರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದೆ.

ಪೊಲೀಸರು ಹಾಗೂ ನಮ್ಮ ಸಮುದಾಯದವರು ಸಹ ಗುಲ್‍ಹಸನ್ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಇದಲ್ಲದೇ ಮುಸ್ಲಿಂ ಸಮುದಾಯದ ಯಾವೊಬ್ಬ ಮುಖಂಡರು ಸಹ ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಮನನೊಂದು ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

UP2

ಈ ಕುರಿತು ಪ್ರತಿಕ್ರಿಯಿಸಿರುವ ಭಾಗ್‍ಪತ್ ಜಿಲ್ಲಾ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ, ಕುಟುಂಬಸ್ಥರು ಪೊಲೀಸರ ಮೇಲೆ ಆರೋಪಿಸುತ್ತಿರುವ ಆಪಾದನೆ ನಂಬಿಕಾರ್ಹವಾಗಿದ್ದು, ಅಲ್ಲದೇ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಐವರ ವಿರುದ್ಧ ದೂರು ದಾಖಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ಬಿಟ್ಟು, ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣದ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪ್ರಕರಣದ ಸ್ಪಷ್ಟತೆ ನಿಖರವಾಗಿ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಅಲ್ಲದೇ ಈ ಬಗ್ಗೆ ಮಾತನಾಡಿದ ಭಾಗ್‍ಪತ್ ಮ್ಯಾಜಿಸ್ಟ್ರೇಟ್ ರಿಶಿರೇಂದ್ರ ಕುಮಾರ್ ಮಾತನಾಡಿ, ಅಖ್ತರ್ ಕುಟುಂಬ ಕೇವಲ ಪೊಲೀಸರ ಮೇಲೆ ಒತ್ತಡ ಹೇರಿ, ಪ್ರಕರಣವನ್ನು ವಿಚಾರಣೆ ಮಾಡಲು ಈ ರೀತಿ ಮುಂದಾಗಿದ್ದಾರೆ. ಸೋಮವಾರ 20 ಸದಸ್ಯರ ಕುಟಂಬದಲ್ಲಿನ ಐವರು ಮಾತ್ರ ಧರ್ಮ ಬದಲಾಯಿಸುವಂತೆ ಭಾರತ್ ತೆಹಲ್ಸಿಗೆ ಬಂದಿದ್ದರು ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *