ಗೌರಿ ಹತ್ಯೆಯ ಶಂಕಿತ ಹಂತಕರಿಂದ ಸ್ಫೋಟಕ ಮಾಹಿತಿ

Public TV
2 Min Read
gauri New yadave vagamore copy

-ಮಾಧ್ಯಮಗಳ ಜೊತೆ ಮಾತನಾಡಿದ ಪರಶುರಾಮ್ ವಾಗ್ಮೋರೆ, ಮನೋಹರ್ ಯಡವೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಂಕಿತ ಆರೋಪಿಗಳಾದ ಮನೋಹರ್ ಯಡವೆ ಮತ್ತು ಪರಶುರಾಮ್ ವಾಗ್ಮೋರೆ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.

ಇಂದು ಕೋಕಾ ನ್ಯಾಯಾಲಯಕ್ಕೆ 13 ಆರೋಪಿಗಳನ್ನು ಎಸ್‍ಐಟಿ ಅಧಿಕಾರಿಗಳು ಕರೆತಂದಿದ್ದರು. ಈ ವೇಳೆ ಮಾಧ್ಯಮಗಳನ್ನು ನೋಡುತ್ತಲೇ ಪರಶುರಾಮ್ ವಾಗ್ಮೋರೆ, ನಾವು ಏನು ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು, ಹಿಂದೂ ಪರ ಸಂಘಟನೆಗಳಲ್ಲಿ ಇದ್ದಿದ್ದು ನಿಜ. ಆದರೆ ಕೊಲೆ ಮಾಡೋ ಮಟ್ಟಕ್ಕೆ ಹೋಗೋರಲ್ಲ. ನಮಗೂ ಇದಕ್ಕೂ ಏನು ಸಂಬಂಧ ಇಲ್ಲ ಸುಮ್ಮನೆ ನಮ್ಮನ್ನು ತಂದು ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬರು ಹೊಡೀತಿದ್ದಾರೆ, ಒಬ್ಬರು ಕನ್ವಿನ್ಸ್ ಮಾಡುತ್ತಿದ್ದಾರೆ. ನಿಮ್ಮ ಫ್ಯಾಮಿಲಿಗೆ 25 ಲಕ್ಷ, 30 ಲಕ್ಷ ಕೊಟ್ತಿವಿ ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ ಅಂತಾ ಹೇಳಿದ್ದಾನೆ.

vadave

ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳದೇ ಇದ್ದಲ್ಲಿ ನಿಮ್ಮ ಅಣ್ಣ ಅಥವಾ ತಮ್ಮ ಅಥವಾ ಗೆಳೆಯರನ್ನು ತಂದು ಫಿಟ್ ಮಾಡ್ತಿವಿ ಎಂದು ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದಾರೆ. 8 ದಿನ ಟಾರ್ಚರ್ ಕೊಟ್ಟಿದ್ದಾರೆ. ಖಾಲಿ ಪೇಪರ್ ಮೇಲೆ ಸ್ಟೇಟ್‍ಮೆಂಟ್ ತಗೊಂಡಿದ್ದಾರೆ, ಖಾಲಿ ಪೇಪರ್‍ನಲ್ಲಿ ಸಹಿ ಪಡೆದಿದ್ದಾರೆ.. ಅವರೆ ಹೇಳಿಕೊಟ್ಟಿದ್ದನ್ನು ಹೇಳಿಸಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬದ ಸದಸ್ಯರಿಗೆ ಏನಾದರೂ ಆದ್ರೆ ಎಸ್‍ಐಟಿ ಅವರೆ ಹೊಣೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಇದುವರೆಗೂ ಚೇತರಿಸಿಕೊಂಡಿಲ್ಲ. ಇದಕ್ಕೆಲ್ಲಾ ಯಾರು ಹೊಣೆ? ಇಲ್ಲಿರೋರು ಯಾರೂ ನಮಗೂ ಪರಿಚಯವೇ ಇಲ್ಲ. ಫೋನ್ ಲಿಂಕ್ ಸಹ ಇಲ್ಲ. ಎಲ್ಲರನ್ನೂ ಇಲ್ಲಿ ತಂದು ಗುಡ್ಡೆ ಹಾಕಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಅಂತಾ ಪರಶುರಾಮ್ ಹೇಳಿದ್ದಾನೆ.

ನನಗೂ ಇದಕ್ಕೂ ಸಂಬಂಧವೇ ಇಲ್ಲ. ಅನಾವಶ್ಯಕವಾಗಿ ನಮ್ಮನ್ನು ಇಲ್ಲಿ ತಂದು ಫಿಟ್ ಮಾಡಿದ್ದಾರೆ. ಬಂಧನವಾಗಿರೋರೆಲ್ಲ ನಮಗೆ ಪರಿಚಯವೇ ಇಲ್ಲ. ಇವರೆಲ್ಲಾ ಇಲ್ಲಿ ಬಂದ ಮೇಲೆಯೇ ನಮಗೆ ಗೊತ್ತಾಗಿದ್ದು, ಯಾರದ್ದೋ ಫೋಟೋ ತಂದು ತೋರಿಸಿ, ಇವರು ಪರಿಚಯ ಎಂದು ಒಪ್ಪಿಕೊಳ್ಳಿ ಅಂತಾರೆ. ಮೇ 14ರಂದು ಬಂಧಿಸಿ, ಭಗವಾನ್ ಹತ್ಯೆ ಕೇಸ್ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮನೋಹರ್ ಯಡವೆ ಆರೋಪಿಸಿದ್ದಾನೆ.

Gauri vagamore copy

ಎಸ್‍ಐಟಿ ಆರೋಪಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಮೇಲೆ ಬಂಧಿಸಿದ್ದಾರೆ. ಇದೂವರೆಗೂ ಆರೋಪಿಗಳು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಇಂದು ದಿಢೀರ್ ಅಂತಾ ಮಾಧ್ಯಮಗಳನ್ನು ಕಂಡಕೂಡಲೇ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/oKmyWQuoB5M

Share This Article
Leave a Comment

Leave a Reply

Your email address will not be published. Required fields are marked *