ವಿಜಯಪುರ: ರೈತರಿಗೆ ನೋಟಿಸ್ ನೀಡ್ಬೇಡಿ ಅಂತ ಬ್ಯಾಂಕ್‍ಗಳಿಗೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ರೂ ಸಿಎಂ ಮಾತಿಗೆ ಕಿಮ್ಮತ್ತಿಲ್ಲ ಅನ್ನೋದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದೇವೆ. ಶೀಘ್ರದಲ್ಲೇ ಎಲ್ಲ ರೈತರ ಮನೆಗೆ ಋಣಮುಕ್ತ ಪತ್ರ ಬರಲಿದೆ ಎಂದು ಹೇಳುತ್ತಿದ್ದಾರೆ. ಆದ್ರೆ ಇತ್ತ ರೈತರ ಮನೆಬಾಗಿಲಿಗೆ ಋಣಮುಕ್ತ ಪತ್ರದ ಬದಲಾಗಿ ಸಾಲ ತುಂಬುವಂತೆ ಬ್ಯಾಂಕ್ ಗಳು ಕಳುಹಿಸಿದ ನೊಟೀಸ್ ಬರುತ್ತಿವೆ. ಮೊದಲೇ ಬರಗಾಲದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೈತರಿಗೆ ಬ್ಯಾಂಕ್ ಕಳುಹಿಸಿದ ತಿಳುವಳಿಕೆ ಪತ್ರಗಳಿಗೆ ಬೆಚ್ಚಿ ಬಿದ್ದಿದ್ದಾರೆ. ಒಂದೇ ಕಂತಿನಲ್ಲಿ ಹಣ ಪಾವತಿಸಿ 5 ಪರ್ಸೆಂಟ್ ಡಿಸ್ಕೌಂಟ್ ಪಡೆಯಿರಿ ಎಮದು ನೋಟಿಸ್ ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಸಾಲಮನ್ನಾ ಘೋಷಣೆ ನಂತರವೂ ರೈತರ ಜೀವ ಹಿಂಡುತ್ತಿವೆ ಬ್ಯಾಂಕ್ ನೋಟಿಸ್‍ಗಳು!
ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ ಹಣ ಪಾವತಿಯಾಗುವ ಮುನ್ನವೇ ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರ ಬಾಕಿ ಹಣ ಭರಣಾ ಮಾಡಿಕೊಳ್ಳಲು ಮುಂದಾಗಿವೆ. ಅದಕ್ಕಾಗಿ ಋಣ ಇತ್ಯರ್ಥ ಯೋಜನೆ ಜಾರಿಗೆ ತಂದು ಕೂಡಲೇ ಸಾಲವನ್ನು ಒಂದೇ ಕಂತಿನಲ್ಲಿ ತುಂಬುವಂತೆ ನೋಟಿಸ್ ನೀಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಮನೆಯನ್ನೇ ತೊರೆದ ರೈತ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv