ಕೈ- ತೆನೆ ಮೈತ್ರಿಕೂಟಕ್ಕೆ ಮತ್ತೆ ಬಿಬಿಎಂಪಿ ಅಧಿಕಾರ

Public TV
1 Min Read
bbmp congress jds elections

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಪಟ್ಟವನ್ನು ಮತ್ತೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ತನ್ನಲ್ಲಿ ಉಳಿಸುವಲ್ಲಿ ಯಶಸ್ವಿಯಾಗಿದೆ. 130 ಮತಗಳನ್ನು ಪಡೆಯುವ ಮೂಲಕ ಮೇಯರ್ ಆಗಿ ಕಾಂಗ್ರೆಸ್ಸಿನ ಗಂಗಾಬಿಕೆ ಆಯ್ಕೆ ಆಗಿದ್ದರೆ, ಉಪಮೇಯರ್ ಆಗಿ ಜೆಡಿಎಸ್‍ನ ರಮೀಳಾ ಆಯ್ಕೆಯಾಗಿದ್ದಾರೆ.

ಚುನಾವಣೆಗೂ ಮುನ್ನ ಭಾರೀ ಹೈಡ್ರಾಮವೇ ನಡೆದಿತ್ತು. ಕೈ ಮತ್ತು ಬಿಜೆಪಿ ನಾಯಕರ ನಡುವೆ ನೂಕಾಟ ನಡೆದಿತ್ತು. ಒಟ್ಟು 259 ಮತದಾರರ ಪೈಕಿ 253 ಮಂದಿ ಹಾಜರಾಗಿದ್ದರು. ಕಾಂಗ್ರೆಸ್ ಶಾಸಕ ರೋಷನ್ ಬೇಗ್, ಕಾಂಗ್ರೆಸ್ ಕಾರ್ಪೊರೇಟರ್ ಆಶಾ ಸುರೇಶ್, ಲಲಿತಾ, ರಾಜ್ಯ ಸಭೆ ಸದಸ್ಯೆ ನಿರ್ಮಲಾ ಸೀತಾರಾಮ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ಅನಂತ್ ಕುಮಾರ್, ಜೆಡಿಎಸ್ ಸದಸ್ಯೆ ನಜೀಂ ಖಾನಂ ಗೈರು ಹಾಜರಿ ಹಾಕಿದ್ದರು.

ಸಿ.ಆರ್.ಮನೋಹರ್, ಜಯರಾಂ ರಮೇಶ್, ರಘು ಆಚಾರ್, ಉಗ್ರಪ್ಪ ಮತದಾನಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತದಾನಕ್ಕೆ ಅವಕಾಶ ನೀಡದಂತೆ ಬಿಜೆಪಿ ನಾಯಕರ ಬಿಗಿಪಟ್ಟು ಹಿಡಿದರೂ ಈಗಾಗಲೇ ಮತದಾರರ ಪಟ್ಟಿ ಘೋಷಣೆ ಆಗಿರುವ ಕಾರಣ ಮತದಾನಕ್ಕೆ ಅವಕಾಶ ನೀಡುತ್ತೇವೆ ಎಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾಂಗಣದಿಂದಲೇ ಹೊರ ನಡೆದರು.  ಇದನ್ನೂ ಓದಿ: ಬಿಬಿಎಂಪಿ ಸಭಾಂಗಣದ ಒಳಗೆಯೇ ಕಿತ್ತಾಡಿಕೊಂಡ ಕಾಂಗ್ರೆಸ್, ಬಿಜೆಪಿ ಸದಸ್ಯರು!

ಬಿಜೆಪಿ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಜಂಗಲ್ ರಾಜ್ ನಂತೆ ಚುನಾವಣೆ ನಡೆಸುತ್ತಿದ್ದರೆ. ಗೂಂಡಾಗಿರಿ ಮಾಡಿ ಪಕ್ಷೇತರರನ್ನ ಹೈಜಾಕ್ ಮಾಡಲಾಗಿದೆ. ಚುನಾವಣಾಧಿಕಾರಿ ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ನಾಲ್ವರು ಪರಿಷತ್ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡದಂತೆ ದೂರು ನೀಡಿದ್ದರೂ ಅವಕಾಶ ನೀಡಿದ್ದಾರೆ. ಇದು ಅಕ್ರಮವಾದ ಕಾರಣ ಚುನಾವಣೆ ಬಹಿಷ್ಕರಿಸಿ ಹೊರಗಡೆ ಬಂದಿದ್ದೇವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *