ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೈಕ್ ವೀಲ್ಹಿಂಗ್ ಹಾವಳಿ ಹೆಚ್ಚಾಗಿದ್ದು, ವ್ಹೀಲಿಂಗ್ ಮಾಡುವ ವೇಳೆ ಯುವಕನೊಬ್ಬ ಪಾದಾಚಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿದೆ.
ಅಪಘಾತವಾಗುತ್ತಿದ್ದಂತೆಯೇ ಡಿಕ್ಕಿಯಾದ ವ್ಯಕ್ತಿಗೆ ಏನಾಗಿದೆ ಎಂದು ಬಂದು ನೋಡದ ಯುವಕ ಸ್ಥಳದಲ್ಲೇ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸದ ಕಾರಣ ಅಸಮಾಧಾನಗೊಂಡ ಸಾರ್ವಜನಿಕರು ಬೈಕ್ ಅನ್ನು ಅದೇ ಮಾರ್ಗದ ಮರವೊಂದಕ್ಕೆ ಕಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್ ಮರಕ್ಕೆ ಕಟ್ಟಿ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿರುವ ಸಾರ್ವಜನಿಕರು. ವ್ಹೀಲಿಂಗ್ ಮಾಡಿದವರಿಗೂ ಹೀಗೆ ಮಾಡುತ್ತೇವೆ ಎಂದು ಫಲಕ ಬರೆದು ಬೈಕಿಗೆ ನೇತು ಹಾಕಿದ್ದಾರೆ. ಸೆಪ್ಟೆಂಬರ್ 25ರ ರಾತ್ರಿ 10.30ಕ್ಕೆ ಈ ಘಟನೆ ನಡೆದಿದ್ದು, ನಗರದ ಹಲವೆಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv