ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಮದುವೆ ಫಿಕ್ಸ್!

Public TV
2 Min Read
saina 2 1

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್  ತಾರೆ ಸೈನಾ ನೆಹ್ವಾಲ್ ಮದುವೆಯಾಗಲು ನಿರ್ಧರಿಸಿದ್ದು, ವರ್ಷಾಂತ್ಯಕ್ಕೆ ಅವರ ವಿವಾಹ ನಡೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸೈನಾ ಮದುವೆ ಆಗುತ್ತಿರುವ ವರ ಯಾರು ಎಂಬ ಕುತೂಹಲವೂ ಹೆಚ್ಚಿನ ಅಭಿಮಾನಿಗಳಲ್ಲಿ ಇದ್ದು, ಸೈನಾ ನೆಹ್ವಾಲ್ ಗುರು ಗೋಪಿಚಂದ್ ಅವರ ಗರಡಿಯಲ್ಲಿ ಪಳಗಿದ ಪಾರುಪಲ್ಲಿ ಕಶ್ಯಪ್‍ರನ್ನೇ ಮದುವೆ ಆಗಲಿದ್ದಾರೆ. ಈ ಇಬ್ಬರು ತಾರೆಯರು ಕೂಡ ಗೋಪಿಚಂದ್ ಅವರ ಬಳಿಯೇ ತರಬೇತಿ ಪಡೆದಿದ್ದಾರೆ. ಇಬ್ಬರ ವಿವಾಹ ಕಾರ್ಯಕ್ರಮ ಡಿಸೆಂಬರ್ 16 ರಂದು ನಡೆಯಲು ಸಿದ್ಧತೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

saina 5

ಕುಟುಂಬಗಳ ಹಿರಿಯರು ಈಗಾಗಲೇ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ನಡೆಸಿದ್ದಾರೆ. ಮದುವೆಯ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತ ವಲಯದ ಕೆಲವೇ ಮಂದಿಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ. ಮದುವೆ ಬಳಿಕ ಅಂದರೆ ಡಿಸೆಂಬರ್ 21 ರಂದು ನಡೆಯುವ ಆರತಕ್ಷತೆ ಸಮಾರಂಭದಲ್ಲಿ ಸ್ನೇಹಿತರು, ಗಣ್ಯರಿಗೆ ಆಹ್ವಾನ ನೀಡಲಾಗುತ್ತದೆ ಎಂದು ವರದಿಯಾಗಿದೆ.

2005ರಲ್ಲಿ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದ ವೇಳೆ ಕಶ್ಯಪ್ ಹಾಗೂ ಸೈನಾ ನಡುವೆ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. 28 ವರ್ಷದ ಸೈನಾ ನೆಹ್ವಾಲ್ ಹಾಗೂ 32 ವರ್ಷದ ಕಶ್ಯಪ್ ವಿಶ್ವ ಬ್ಯಾಡ್ಮಿಟನ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

saina 3

ಸೈನಾ ನೆಹ್ವಾಲ್ 2014 ರಲ್ಲಿ ಗೋಪಿಚಂದ್ ಅವರ ಬಳಿ ತರಬೇತಿ ತೊರೆದು ಬೆಂಗಳೂರಿನ ವಿಮಲ್ ಕುಮಾರ್ ಅವರ ಬಳಿ ತರಬೇತಿ ಪಡೆಯಲು ಆಗಮಿಸಿದ್ದರು. ಈ ವೇಳೆ ಹಲವು ಬಾರಿ ಕಶ್ಯಪ್ ಬೆಂಗಳೂರಿಗೆ ಬಂದು ಸೈನಾರನ್ನು ಭೇಟಿ ಮಾಡುತ್ತಿದ್ದರು. ಆಗಲೇ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಈ ಕುರಿತು ಇಬ್ಬರು ಎಲ್ಲಿಯೂ ಮಾತನಾಡಿರಲಿಲ್ಲ. ಬಳಿಕ ಸೈನಾ ಮತ್ತೆ ಬೆಂಗಳೂರಿನಿಂದ ಗೋಪಿಚಂದ್ ಅವರ ತರಬೇತಿ ಕೇಂದ್ರಕ್ಕೆ ಶಿಪ್ಟ್ ಆಗಿದ್ದರು. ಸೈನಾರ ಈ ನಿರ್ಧಾರಕ್ಕೆ ಕಶ್ಯಪ್ ಅವರೊಂದಿನ ಪ್ರೀತಿಯೂ ಒಂದು ಕಾರಣ ಎನ್ನಲಾಗಿದೆ. ಸೈನಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲೂ ಕಶ್ಯಪ್ ರೊಂದಿನ ಫೋಟೋಗಳನ್ನೇ ಹೆಚ್ಚು ಪೋಸ್ಟ್ ಮಾಡುತ್ತಿದ್ದ ಕಾರಣ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

ಈ ಹಿಂದೆಯೂ ಕೂಡ ಕ್ರೀಡಾ ಕ್ಷೇತ್ರದಲ್ಲಿರುವ ಹಲವು ಸ್ಟಾರ್ ಗಳು ವಿವಾಹವಾಗಿದ್ದು, ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್-ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್, ಇಶಾಂತ್ ಶರ್ಮಾ-ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್, ಕುಸ್ತಿ ಪಟು ಗೀತಾ ಪೋಗಟ್- ಕುಸ್ತಿಪಟು ಪವನ್ ಕುಮಾರ್ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್-ಕುಸ್ತಿಪಟು ಸತ್ಯವರ್ತ್ ಕಡಿಯಾನ್ ರೊಂದಿಗೆ ವಿವಾಹವಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Saina 1

https://www.instagram.com/p/BiuZHnPBMif/?hl=en&taken-by=nehwalsaina

https://www.instagram.com/p/BhoNuHKFUmX/?hl=en&taken-by=nehwalsaina

https://www.instagram.com/p/BgdNzPNg6G5/?hl=en&taken-by=nehwalsaina

Share This Article
Leave a Comment

Leave a Reply

Your email address will not be published. Required fields are marked *