ಸಿಎಂ ಮಾತು ಅಧಿಕಾರಿಗಳೂ ಕೇಳ್ತಿಲ್ಲ: ಬಸವರಾಜ್ ಹೊರಟ್ಟಿ

Public TV
1 Min Read
BASAVARAJ HORATTI HDK

ಬಳ್ಳಾರಿ: ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿರೋಧ ಪಕ್ಷದ ಆರೋಪದ ನಡುವೆಯೇ ಜೆಡಿಎಸ್ ಮುಖಂಡರು ಹಾಗೂ ಪರಿಷತ್ ಸಭಾಪತಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶವನ್ನು ರಾಜ್ಯದ ಅಧಿಕಾರಿಗಳೂ ಕೇಳುತ್ತಿಲ್ಲವೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಂಡ್ಯದ ರೈತರ ಆತ್ಮಹತ್ಯೆ ಕಣ್ಣಲ್ಲಿ ನೀರು ಬರಿಸುತ್ತಿದೆ. ರೈತನ ಆತ್ಮಹತ್ಯೆಗೂ ಮುನ್ನ ಅಧಿಕಾರಿಗಳು ಸಿಎಂ ಕುಮಾರಸ್ವಾಮಿಯವರ ಆದೇಶ ಪಾಲಿಸಿದ್ದರೆ ಆ ರೈತನ ಆತ್ಮಹತ್ಯೆ ತಡೆಗಟ್ಟಬಹುದಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಅನ್ನದಾತರ ಆತ್ಮಹತ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.

vlcsnap 2018 09 23 14h01m19s500

ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಮಾಡಿದ್ದಾರೆ, ಆದರೆ ಅಧಿಕಾರಿಗಳು ಸಾಲಮನ್ನಾ ಜಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ಮಂಡ್ಯ ರೈತನ ಆತ್ಮಹತ್ಯೆ ವಿಚಾರದಲ್ಲಿ ತೋಟಗಾರಿಕೆ ಸಚಿವ ಮನಗೂಳಿ ನೀಡಿದ ಹೇಳಿಕೆ ಸರಿಯಲ್ಲ. ತೋಟಗಾರಿಕೆ ಸಚಿವರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಬೇಕು. ರೈತರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಶನಿವಾರ ಮಂಡ್ಯ ಘಟನೆ ಬಗ್ಗೆ ಟಿವಿಯಲ್ಲೂ ನೋಡುತ್ತಿದ್ದೆ, ಆದರೆ ಘಟನೆ ನೋಡಿದ ನಂತರ ಊಟ ಮಾಡಲಾಗದೇ ಟಿವಿ ಆಫ್ ಮಾಡಿ ಮಲಗಿಬಿಟ್ಟೆ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಕ್ಷೇತ್ರದ ಜನತೆಗೆ ನಾನು ಮಂತ್ರಿಯಾಗಬೇಕೆನ್ನುವ ಆಸೆ ಬಹಳ ಇತ್ತು. ಆದರೆ ಈಗ ವಿಧಾನ ಪರಿಷತ್ ಸಭಾಪತಿಯಾಗಿದ್ದೇನೆ. ನಾನೂ ಅಲ್ಲಿಯೂ ಸಾಕಾಗಿದ್ದೇನೆ, ಇಲ್ಲಿಯೂ ಸಾಕಾಗಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು. ಇದನ್ನೂ ಓದಿ: ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆದ್ರೆ ದುಡುಕಿನ ನಿರ್ಧಾರ – ಮಂಡ್ಯ ರೈತನ ಆತ್ಮಹತ್ಯೆ ಬಗ್ಗೆ ಸಿಎಂ ವಿಷಾದ

UDP HDK

ಅಧಿಕಾರಿಗಳು ಸಿಎಂ ಮಾತನ್ನು ಕೇಳ್ತಿಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಸೆಕ್ಷನ್ ನಲ್ಲಿ ಬರೆಯಿರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *