ಪತಿಗೆ ಸಾಲ ಹೊರಿಸಿ ಪ್ರಿಯಕರನ ಜೊತೆ ಎಸ್ಕೇಪ್!

Public TV
1 Min Read
DWD WIFE MISSING

ಧಾರವಾಡ: ಹೋಟೆಲ್ ಮಾಲೀಕನ ಪತ್ನಿಯೊಬ್ಬಳು ತನ್ನ ಪ್ರೇಮಿ ಜೊತೆ ಓಡಿ ಹೋಗಿದ್ದಲ್ಲದೇ, ಪತಿಯ ಹೆಸರಿಗೆ ಸಾಲ ಮಾಡಿ ಹೋದ ಘಟನೆ ಅಳ್ನಾವರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹೊಟೇಲ್ ಮಾಲೀಕ ಮಂಜುನಾಥ ಪೈ ಮತ್ತು ನೀತಾ ನಡುವೆ 12 ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯ ನಂತರ ಚೆನ್ನಾಗಿಯೇ ಜೀವನ ನಡೆಸಿದ್ದ ಇವರ ನಡುವೆ, ಅಭಿಷೇಕ್ ಎನ್ನುವ ವ್ಯಕ್ತಿ ಬಂದಿದ್ದಾನೆ.

ಅಭಿಷೇಕ್ ಹಾಗೂ ನೀತಾಳಿಗೆ ಸ್ನೇಹ ಬೆಳೆದು, ಆ ಸ್ನೇಹ ಪ್ರೀತಿಯಲ್ಲಿ ಪರಿವರ್ತನೆಯಾಗಿದೆ. ಕಳೆದ 2015 ರಲ್ಲಿ ನೀತಾ ತನ್ನ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಅಭಿಷೇಕ್ ಜೊತೆ ಪರಾರಿಯಾಗಿದ್ದಾಳೆ. ಹೋಗುವಾಗ ಮಹಿಳಾ ಸಂಘಗಳಲ್ಲಿ ಸಾಲ ಮಾಡಿದ್ದಲ್ಲದೇ, ಮನೆಯಲ್ಲಿದ್ದ 90 ಗ್ರಾಂ ಚಿನ್ನ ಕೂಡಾ ತೆಗೆದುಕೊಂಡು ಹೋಗಿದ್ದಾಳೆ.

dwd wife missing

ಪತಿ ಮಂಜುನಾಥ್ ಅವರಿಗೆ ಪತ್ನಿ ಮಾಡಿದ ಸಾಲ ತೀರಿಸಲು ಸಾಲಗಾರರು ಬಂದು ಈಗ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಆಕೆ ಬಾರದೇ ಇದರೂ ಪರವಾಗಿಲ್ಲ, ಆ ಸಾಲವನ್ನಾದರೂ ತೀರಿಸಿ ಹೋಗಲಿ ಎಂದು ಮಂಜುನಾಥ್ ಹೇಳಿದ್ದಾರೆ.

ಸದ್ಯ ಅಳ್ನಾವರ ಪೊಲೀಸರಿಗೆ, ಎಸ್‍ಪಿ ಹಾಗೂ ಡಿವೈಎಸ್‍ಪಿಗೆ ಸಾಕಷ್ಟು ಬಾರಿ ಮನವಿ ಮಾಡಿರುವ ಮಂಜುನಾಥ್ ಸಾಲಗಾರರ ಕಾಟದಿಂದಾಗಿ ಅಳ್ನಾವರ ಪಟ್ಟಣ ಬಿಟ್ಟು ಶಿರಸಿಗೆ ಹೋಗಿ ಹೊಟೇಲ್‍ವೊಂದರಲ್ಲಿ ಕೆಲಸ ಮಾಡುವ ಸ್ಥಿತಿ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *