ಬೆಂಗಳೂರು: ಕಾವಲ್ ಭೈರಸಂದ್ರದ ಬಸ್ ಸ್ಟಾಪ್ ಬಳಿ ಹೆತ್ತ ತಾಯಿಯೇ ಕಂದಮ್ಮನನ್ನು ಕೊಲೆ ಮಾಡಿರುವ ಶಂಕೆಯೊಂದು ವ್ಯಕ್ತವಾಗುತ್ತಿದೆ.
ವರ್ಷ(3) ಮೃತಪಟ್ಟ ಮಗುವಾಗಿದ್ದು, ಪ್ರಿಯಾ(29) ಮಗುವಿಗೆ ಹೊಡೆದ ತಾಯಿ. ತನಗೆ ಹೆಣ್ಣು ಮಗು ಇಷ್ಟ ಇಲ್ಲ ಎಂದು ತಾಯಿ ಪ್ರಿಯಾ ಪ್ರತಿನಿತ್ಯ ಹೊಡೆಯುತ್ತಿದ್ದಳು. ಆದರೆ ಇಂದು ತನ್ನ ಮಗುವನ್ನು ಹೊಡೆದು ಆಕೆಯೇ ಕೊಲೆ ಮಾಡಿದ್ದಾಳಾ ಎಂಬ ಸಂಶಯ ಹುಟ್ಟಿದೆ.
ಸದ್ಯ ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಮೇಲೆ ಬಿಸಿನೀರು ಬಿದ್ದಿದ್ದು, ಸರಿಯಾಗಿ ಚಿಕಿತ್ಸೆ ಕೊಡಿಸದೆ ಮೃತಪಟ್ಟಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಸದ್ಯ ಪ್ರಿಯಾ 8 ತಿಂಗಳ ಗರ್ಭಿಣಿಯಾಗಿದ್ದು, ಸ್ಥಳೀಯರು ಪ್ರಿಯಾ ವಿರುದ್ಧ ಆಕೆಯ ಮನೆ ಮುಂದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv