ವಿಕ್ಟರಿ 2 ಸಿನಿಮಾ ಸೆಟ್‍ನಲ್ಲಿ ಚಕ್ರವರ್ತಿ

Public TV
1 Min Read
VICTORY 2 2

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಕ್ಟರಿ 2 ಸಿನಿಮಾದ ಸೆಟ್ಟಿಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ದರ್ಶನರವರ ಈ ಭೇಟಿಯಿಂದ ಅಭಿಮಾನಿಗಳಲ್ಲಿ ಕುತೂಹಲ ಗೊಂದಲ ಎರಡು ಉಂಟಾಗಿದೆ. ಏಕೆಂದರೆ ತರುಣ್, ಶರಣ್ ಹಾಗೂ ದರ್ಶನ್ ನಡುವೆ ಉತ್ತಮ ಸ್ನೇಹಯುತ ಸಂಪರ್ಕವಿದೆ. ಈ ಹಿಂದೆ ತರುಣ್ ನಿರ್ದೇಶನದ ಚೌಕ ಸಿನಿಮಾದ ಹಾಡಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಅದೇ ರೀತಿ ವಿಕ್ಟರಿ-2 ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರಾ ಎಂಬುದು ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಇದನ್ನು ಓದಿ: ವಿಕ್ಟರಿ-2 ಚಿತ್ರದ ಟೀಸರ್ ಸೋಮವಾರ ರಿಲೀಸ್

VICTORY 2 1 1

ಶರಣ್ ಅಭಿನಯದ ರ‍್ಯಾಂಬೊ-2 ಸಿನಿಮಾ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇದೀಗ ಶರಣ್ ವಿಕ್ಟರಿ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ ದರ್ಶನ್ ಸಿನಿಮಾ ಸೆಟ್ಟಿಗೆ ಭೇಟಿ ನೀಡಿ, ಚಿತ್ರತಂಡದ ಜೊತೆ ಸಮಯ ಕಳೆದಿದ್ದಾರೆ.

ಈ ಚಿತ್ರದಲ್ಲಿ ಹೆಣ್ಣು ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾದ ಫೋಟೋಗಳು ವೈರಲ್ ಆಗಿವೆ. ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ವಿಕ್ಟರಿ 2 ತೆರೆ ಮೇಲೆ ಮಿಂಚಲು ರೆಡಿಯಾಗುತ್ತಿದ್ದು, ಇದಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶರಣ್, ಸಾಧುಕೋಕಿಲ, ರವಿಶಂಕರ್ ಹೆಣ್ಣಿನ ವೇಷದಲ್ಲಿ ಕಾಣಿಕೊಂಡಿದ್ದಾರೆ. ಇದನ್ನು ಓದಿ: ಪ್ಲೀಸ್ ಟ್ರಸ್ಟ್, ನಾನು ಚೀಪ್ & ಬೆಸ್ಟ್- ಆಸ್ಮಿತಾ ಜೊತೆ ವಿಕ್ಟರಿ ಶರಣ್ ಡ್ಯಾನ್ಸ್

tarun shivappa tarum sudhir

ಸದ್ಯಕ್ಕೆ ದರ್ಶನ್ ಅವರು ‘ಯಜಮಾನ’ ಚಿತ್ರಿಕರಣದಲ್ಲಿ ಬ್ಯೂಸಿಯಾಗಿದ್ದು, ಮುಂದೆ ಎಂ.ಡಿ ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾ ಮಾಡಲಿದ್ದಾರೆ. ಬಳಿಕ ಸ್ಯಾಂಡಲ್‍ವುಡ್ ನಲ್ಲಿ ತರುಣ್ ಹಾಗೂ ಹೆಬ್ಬುಲಿ ಉಮಾಪತಿ ಜೋಡಿಯೊಂದಿಗೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಇದನ್ನು ಓದಿ: ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

Victory 2

pic

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *