ಆಪ್ತ ಸ್ನೇಹಿತನಿಗೆ ಸಚಿವ ಸ್ಥಾನ ಸಿಕ್ರೆ ಮೀಸೆ ಬೋಳಿಸ್ತೀನಿ: ಆನಂದ್ ಸಿಂಗ್

Public TV
1 Min Read
anand sing

ಬಳ್ಳಾರಿ: ಒಂದೆಡೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಹವಣಿಸುತ್ತಿದೆ. ಮತ್ತೊಂದೆಡೆ ಸಚಿವ ಸ್ಥಾನ ಪಡೆಯಲು ಕೈ ಶಾಸಕರು ಲಾಭಿ ನಡೆಸೋ ಮೂಲಕ ಕಿತ್ತಾಟ ಶುರುಮಾಡಿದ್ದಾರೆ. ಈ ಮಧ್ಯೆ ತಮಗೆ ಸಚಿವ ಸ್ಥಾನ ನೀಡದೇ ತಮ್ಮ ಸ್ನೇಹಿತನಿಗೆ ಸಚಿವ ಸ್ಥಾನ ಕೊಟ್ಟರೆ ತಮ್ಮ ಮೀಸೆಯನ್ನೆ ಬೋಳಿಸುತ್ತೀನಿ ಎಂದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಆಪ್ತರ ಜೊತೆ ಸಭೆ ನಡೆಸಿದ್ದ ಹಾಲಿ ಶಾಸಕ, ಮಾಜಿ ಸಚಿವ ಆನಂದ್ ಸಿಂಗ್, ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮುನ್ನ ಹೈಕಮಾಂಡ್ ನನಗೆ ಸಚಿವ ಸ್ಥಾನದ ಭರವಸೆ ನೀಡಿದೆ. ಇದೀಗ ಬಳ್ಳಾರಿ ಶಾಸಕ ನಾಗೇಂದ್ರ ಅವರಿಗೆ ಜಾರಕಿಹೊಳಿ ಬ್ರದರ್ಸ್ ಸಚಿವ ಸ್ಥಾನ ಕೊಡಿಸಿದರೆ ತಾವೂ ಮೀಸೆ ಬೋಳಿಸುವುದಾಗಿ ಸ್ನೇಹಿತರ ಮುಂದೆ ಸವಾಲು ಎಸೆದಿದ್ದಾರೆ. ಅಲ್ಲದೇ ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ತಾವೂ ಉಳಿದ ಶಾಸಕರ ಸೇರಿ ಹೈಕಮಾಂಡ್ ಗೆ ತಮ್ಮ ಶಕ್ತಿ ಏನೆಂದು ತೋರಿಸಿ ಕೊಡುವುದಾಗಿ ಆನಂದ್ ಸಿಂಗ್ ಚಾಲೆಂಜ್ ಹಾಕಿದ್ದಾರೆ.

congress logo 1

ಸಚಿವ ಸ್ಥಾನದ ಪ್ರಬಲ ಆಕ್ಷಾಂಕಿಯಾಗಿದ್ದ ಆನಂದ್ ಸಿಂಗ್ ಬಳ್ಳಾರಿಗೆ ಸಚಿವ ಡಿಕೆ ಶಿವಕುಮಾರ್ ನನ್ನು ಸಚಿವರನ್ನಾಗಿ ನೇಮಿಸಿದ್ದಕ್ಕೆ ಅಸಮಾಧಾನಗೊಂಡಿದ್ದರು. ಇದೀಗ ಒಂದು ಕಾಲದಲ್ಲಿ ತಮ್ಮ ಆಪ್ತ ಸ್ನೇಹಿತರಾಗಿದ್ದ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ತಾವೂ ಸುಮ್ಮನಿರಲ್ಲ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *