ರಾಯ್ಪುರ: ತನ್ನ ಅಪ್ರಾಪ್ತ ಪ್ರೇಯಸಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಕಣ್ಣಾರೆ ಕಂಡಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್‍ಗಡದಲ್ಲಿ ನಡೆದಿದೆ.
ಛತ್ತೀಸ್‍ಗಡದ ಕೊರ್ಬಾ ಜಿಲ್ಲೆಯ ಕಟ್ಗೋರಾ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸವನ್ ಸಾಯಿ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಸದ್ಯಕ್ಕೆ ಈಶ್ವರ್ ದಾಸ್(22) ಹಾಗೂ ಕನ್ವಾರ್(21) ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:
ನಾನು ಸಾಯ್ ಇಬ್ಬರು ಮನೆಗೆ ಹೋಗುತ್ತಿದ್ದೆವು. ಆಗ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಬಂದು ಇಬ್ಬರ ಮೇಲು ಹಲ್ಲೆ ಮಾಡಿದರು. ಬಳಿಕ ಸಾಯಿ ಮುಂದೆಯೇ ನನ್ನ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕಾಪಾಡದ ಪರಿಸ್ಥಿತಿಯಲ್ಲಿ ಸಾಯಿ ಇದ್ದನು. ಘಟನೆಯನ್ನು ಕಣ್ಣಾರೆ ಕಂಡಿದ್ದ ಆತ ಬಳಿಕ ಮಾನಸಿಕವಾಗಿ ನೊಂದಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮರುದಿನ ಆರೋಪಿಗಳು ನಡೆದ ಘಟನೆ ಬಗ್ಗೆ ಗ್ರಾಮದ ಕೆಲವು ಯುವಕರಿಗೆ ಹೇಳಿದ್ದಾರೆ. ಇದರಿಂದ ಯುವಕರು ಸಾಯಿಗೆ ಅವಮಾನ ಮಾಡಿರಬಹುದು. ಆದ್ದರಿಂದ ನೊಂದು ಸಾಯಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ವಿಚಾರಣೆ ವೇಳೆ ಸಂತ್ರಸ್ತೆ ತಿಳಿಸಿದ್ದಾಳೆ.
ಸದ್ಯ ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಆರೋಪಿಗಳಾದ ದಾಸ್ ಮತ್ತು ಕನ್ವಾರ್ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv