ರಾಜ್ಯದಲ್ಲೇ ಪ್ರಪ್ರಥಮ ಪರಿಸರ ಸ್ನೇಹಿ ದಾರದ ವಿನಾಯಕನ ಪ್ರತಿಷ್ಠಾಪನೆ

Public TV
1 Min Read
ckb ganesha copy

ಚಿಕ್ಕಬಳ್ಳಾಪುರ: ಇಂದು ವಿಘ್ನ ವಿನಾಶಕ-ನಿವಾರಕ ವಿನಾಯಕ ಚೌತಿ ನಾಡಿನೆಲ್ಲಡೆ ಎಲ್ಲೆಲ್ಲೂ ಬಣ್ಣ-ಬಣ್ಣದ ಮಣ್ಣಿನಿಂದ ಮಾಡಲಾಗಿರುವ ಭಿನ್ನ-ವಿಭಿನ್ನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಸುತ್ತಾರೆ. ಆದರೆ ಇಲ್ಲೊಬ್ಬ ಟೈಲರ್ ಮಾತ್ರ ತಮ್ಮ ಕಸುಬಿಗೆ ತಕ್ಕ ಹಾಗೆ ಬಟ್ಟೆ, ದಾರ, ಬಂಗಾರ, ಬೆಳ್ಳಿ ಬಳಸಿ ಸುಂದರ ಗಣೇಶನನ್ನು ಬಿಡಿಸಿ ಪ್ರತಿಷ್ಠಾಪಿಸಿದ್ದಾರೆ.

ಮಣ್ಣಿನ ಗಣಪನಾ ಎಲ್ಲರೂ ಪ್ರತಿಷ್ಠಾಪಿಸ್ತಾರೆ. ನಾವೇನಾದರೂ ಡಿಫ್ರೆಂಟ್ ಆಗಿ ಮಾಡಬೇಕು ಅಂದುಕೊಂಡ ಚಿಕ್ಕಬಳ್ಳಾಪುರ ನಗರದ ಟೆಂಕರ್ಸ್ ಟೈಲರ್ ಶಾಪ್ ಮಾಲೀಕ ಮುರುಳಿ ಬಟ್ಟೆಯ ಮೇಲೆ ಝರ್ದೋಸಿ, ಕುಂದನ್, ಹಾಗೂ ರೇಷ್ಮೆಯ ದಾರ ಬಳಸಿ ಕಸೂತಿ ಕಲೆಯ ಮೂಲಕ ವಿಘ್ನ ವಿನಾಯಕನನ್ನು ಬಿಡಿಸಿದ್ದಾರೆ. ವಿಶೇಷ ಅಂದರೆ ಗಣೇಶನಿಗೆ 50ಗ್ರಾಂ ಬೆಳ್ಳಿ ಸೇರಿದಂತೆ 10ಗ್ರಾಂ ಚಿನ್ನ ಸಹ ಬಳಸಿ ವಿನಾಯಕನನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

ckb ganesha collage copy

8 ಪಾಯಿಂಟ್ 5 ಅಡಿ ಎತ್ತರ ಹಾಗೂ 6 ಪಾಯಿಂಟ್ 5 ಅಡಿ ಅಗಲ ಇರುವ ಈ ಗಣೇಶನ ಸುತ್ತಲೂ 12 ರಾಶಿಗಳನ್ನು ಸಹ ಬಿಡಿಸಲಾಗಿದೆ. ತಮ್ಮ ಆರು ಮಂದಿ ನುರಿತ ಕೆಲಸಗಾರರ ಜೊತೆ 1 ತಿಂಗಳ ನಿರಂತರ ಶ್ರಮ ಹಾಕಿರುವ ಟೈಲರ್ ಮುರುಳಿ ಸರಿಸುಮಾರು 3 ಲಕ್ಷ ರೂ. ಗಳನ್ನು ಖರ್ಚು ಮಾಡಿ ಈ ಗಣೇಶನನ್ನು ಬಿಡಿಸಿದ್ದಾರೆ. ಸದ್ಯ ಈ ದಾರದ ಗಣೇಶನನ್ನು ನೋಡುಗರ ಮನ ಸೆಳೆಯುತ್ತಿದೆ.

ಕಳೆದ ಬಾರಿಯೂ ಸಹ ಟೈಲರ್ ಮುರುಳಿ 5 ಅಡಿ ಅಗಲ 5 ಅಡಿ ಉದ್ದದ ರೇಷ್ಮೆ ದಾರದ ಗಣಪನನ್ನು ಸಿದ್ಧಪಡಿಸಿ ಪ್ರತಿಷ್ಠಾಪಿಸಿ ಕೊನೆಗೆ ಅದನ್ನು ಶ್ರೀ ಧರ್ಮಸ್ಥಳದ ಮಂಜುನಾಥ ಸನ್ನಿಧಿಗೆ ಕೊಡುಗೆಯಾಗಿ ನೀಡಿದರು. ಈ ಬಾರಿಯೂ ಸಹ ಯಾವುದಾದರೂ ದೇವಾಲಯಕ್ಕೆ ಈ ವಿಘ್ನೇಶ್ವರನನ್ನು ಉಡುಗೊರೆ ನೀಡೋಕೆ ಟೈಲರ್ ಮುರುಳಿ ನಿರ್ಧರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ckb ganesha 5

Share This Article
Leave a Comment

Leave a Reply

Your email address will not be published. Required fields are marked *