ರಶ್ಮಿಕಾ ಬ್ರೇಕಪ್ ಸುದ್ದಿ: ರಕ್ಷಿತ್ ಪರ ಬ್ಯಾಟಿಂಗ್ ಮಾಡಿದ್ರು ಕಿಚ್ಚ ಸುದೀಪ್

Public TV
2 Min Read
RAKDHIT SUDEEP

ಬೆಂಗಳೂರು: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದಾಗಿ ಹೇಳಿದ್ದ ನಟ ರಕ್ಷಿತ್, ಮಂಗಳವಾರವಷ್ಟೇ ಮತ್ತೆ ಫೇಸ್ ಬುಕ್‍ಗೆ ಬಂದು ತನ್ನ ಮನದಾಳದ ಮಾತನ್ನು ಹಂಚಿಕೊಂಡಿದ್ದರು.

ಈ ಬಗ್ಗೆ ಇಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ರಕ್ಷಿತ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಜೀವನದಲ್ಲಿ ಒಳ್ಳೆಯದಾಗಲಿ ಅಂತ ಶುಭಹಾರೈಸಿದ್ದಾರೆ. ಈ ಮೂಲಕ ರಕ್ಷಿತ್ ಪರ ಸುದೀಪ್ ಬ್ಯಾಟಿಂಗ್ ಮಾಡಿದ್ದಾರೆ.

Rakshit shetty and rashmika mandanna 2

ಏನ್ ಹೇಳಿದ್ರು ಕಿಚ್ಚ?:
ಘನತೆ ಹಾಗೂ ಪ್ರಬುದ್ಧವಾಗಿಯೇ ಮಾತನಾಡಿದ್ದೀರಿ. ಖುಷಿಯಾಗಿರಿ ನನ್ನ ಗೆಳೆಯ. ಸೆಲೆಬ್ರಿಟಿಗಳು ಅಂದ ತಕ್ಷಣ ತಮ್ಮೆಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕೆಂದಿಲ್ಲ. ಅದು ಸಾಧ್ಯವೂ ಇಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಬದುಕಿದೆ. ಎಲ್ಲದಕ್ಕೂ ಸಮಯ ಕೂಡಿಬರಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಮತ್ತೆ ಯಾರೂ ಏನೂ ಕೇಳಬೇಕಾಗಿಲ್ಲ ಅಂತ ಅವರು ಬರೆದುಕೊಂಡಿದ್ದಾರೆ.

SUDEEPA 1

ರಕ್ಷಿತ್ ಏನ್ ಹೇಳಿದ್ದರು?:
ನಿನ್ನೆ ಸಂಜೆ ಹೊತ್ತಿಗೆ ಫೇಸ್ ಬುಕ್ ಗೆ ಬಂದ ರಕ್ಷಿತ್, ತನ್ನ ಮತ್ತು ರಶ್ಮಿಕಾ ಮಂದಣ್ಣ ಬ್ರೆಕ್ ಅಪ್ ಸುದ್ದಿ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. `ಕಾರಣಾಂತರಗಳಿಂದ ನಾನು ಸಾಮಾಜಿಕ ಜಾಲತಾಣದಿಂದ ದೂರವಿರುವುದಾಗಿ ತಿಳಿಸಿದ್ದೆ. ಆದ್ರೆ, ಕೆಲವು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡುವುದಕ್ಕಾಗಿ ಮತ್ತೆ ಸೋಷಿಯಲ್ ಮೀಡಿಯಾಗೆ ಬಂದಿದ್ದೇನೆ.

ನೀವೆಲ್ಲರೂ ರಶ್ಮಿಕಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ನೀಡಿದ್ದೀರಿ. ಈ ಘಟನೆಗಳು ಹೇಗೆ ಸಂಭವಿಸಿತು ಎಂಬ ಬಗ್ಗೆ ನಾನು ಯಾರನ್ನು ದೂಷಿಸುವುದಿಲ್ಲ. ನಾವೆಲ್ಲರೂ ನಮ್ಮ ಕಣ್ಣ ಮುಂದೆ ಏನ್ ನೋಡುತ್ತೇವೆ ಮತ್ತು ಏನು ಹೇಳುತ್ತೇವೆ ಅನ್ನೋದನ್ನು ಮಾತ್ರ ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕು ಅಂತ ಏನಿಲ್ಲ.

rakshith shetty rashimak facebook post

ನಾನು ರಶ್ಮಿಕಾಳನ್ನು ಎರಡು ವರ್ಷದಿಂದ ನೋಡುತ್ತಿದ್ದು, ಆಕೆ ಏನು ಎನ್ನುವುದು ನಿಮಗೆಲ್ಲರಿಗಿಂತಲೂ ಚೆನ್ನಾಗಿ ನನಗೆ ತಿಳಿದಿದೆ. ದಯವಿಟ್ಟು ಆಕೆಯ ಮೇಲೆ ದೂಷಣೆ ಮಾಡುವುದನ್ನು ನಿಲ್ಲಿಸಿ. ಆಕೆಯನ್ನು ಶಾಂತಿಯಿಂದ ಇರಲು ಬಿಡಿ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನು ನಂಬಲು ಹೋಗಬೇಡಿ. ಯಾರೊಬ್ಬರು ನನ್ನಿಂದ ಅಥವಾ ರಶ್ಮಿಕಾಳಿಂದ ಈ ವಿಚಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿಲ್ಲ. ಹಲವು ಮಂದಿ ಅವರ ಊಹೆಗೆ ತಕ್ಕಂತೆ ಅವರಿಗೆ ಬೇಕಾದಂತೆ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಊಹೆಗಳು ಯಾವತ್ತೂ ವಾಸ್ತವವಲ್ಲ. ಇದನ್ನೂ ಓದಿ: ರಶ್ಮಿಕಾ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು – ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ

rakshith shetty rashimak facebook post 1

ಈ ಮಾಹಿತಿ ಬಹುತೇಕರಿಗೆ ತಲುಪುವರೆಗೂ ನನ್ನ ಫೇಸ್ ಬುಕ್ ಇನ್ನಷ್ಟು ದಿನ ಚಾಲ್ತಿಯಲ್ಲಿರುತ್ತದೆ. ಅಗತ್ಯವಿದ್ದಾಗ ನಾನು ಮತ್ತೆ ಫೇಸ್ ಬುಕ್ ನಲ್ಲಿ ನಿಮ್ಮ ಮುಂದೆ ಬರ್ತೀನಿ. ಕೆಲಸದಲ್ಲಿ ಜಾಸ್ತಿ ಗಮನಹರಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಅಂತ ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *