ರಾಷ್ಟ್ರೀಯ ಸಮಾರಂಭದಲ್ಲಿ ತಂಬಾಕು ಸೇವಿಸಿ ಸಿಕ್ಕಿಬಿದ್ದ ಅಫ್ರಿದಿ

Public TV
1 Min Read
AFRIDI

ಇಸ್ಲಾಮಾಬಾದ್: ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಿವೃತ್ತಿಯ ಬಳಿಕವೂ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ದಿವಸ್ ಕಾರ್ಯಕ್ರಮ ಸೆ.6 ರ ಗುರುವಾರದಂದು ರಾವಲ್ಪಿಂಡಿಯಲ್ಲಿ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಅಫ್ರಿದಿ ಯಾರಿಗೂ ತಿಳಿದಂತೆ ತಂಬಾಕು ಸೇವನೆ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಕಾರ್ಯಕ್ರಮದಲ್ಲಿ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

https://twitter.com/babarbinatta/status/1037726413959450624

ಅಫ್ರಿದಿ ತಂಬಾಕು ಸೇವಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಕುಳಿತಿದ್ದ ಅಫ್ರಿದಿ ತಮ್ಮ ಜೇಬಿನಿಂದ ತಂಬಾಕು ತಗೆದು ಯಾರಿಗೂ ತಿಳಿಯದಂತೆ ಸೇವಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಟ್ವೀಟಿಗರು ಅಫ್ರಿದಿಯನ್ನು ಟ್ರೋಲ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಫ್ರಿದಿಯ ವಿಡಿಯೋ ನೋಡಿದವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಕ್ಷಣಾ ಕಾರ್ಯಕ್ರಮದಲ್ಲಿ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರ ಪಕ್ಕದಲ್ಲೇ ಕುಳಿತು ಅಫ್ರಿದಿ ಈ ರೀತಿ ವರ್ತಿಸಿದ್ದ ವಿರುದ್ಧ ಬೇಸರ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ. ಕೆಲವರು ಅಫ್ರಿದಿ ಕಾಲೆಳೆದು ರೀ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *