ಹೇಗಿದೆ ಗರ್ಭಿಣಿ ರಾಧಿಕಾ ಆಹಾರ ಶೈಲಿ

Public TV
2 Min Read
Radhika Pandit copy

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ತಾಯಿ ಆಗುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಮದುವೆ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರೂ ರಾಧಿಕಾ ತಮ್ಮ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ. ಈಗ ರಾಧಿಕಾ ಗರ್ಭಿಣಿ ಆದ್ಮೇಲೂ ಡಯಟ್ ಮಾಡ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುತ್ತದೆ. ಆದ್ರೆ ಅದೆಲ್ಲಾ ಸುಳ್ಳು, ರಾಧಿಕಾ ತಮ್ಮಿಬ್ಬರಗಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡುತ್ತಿದ್ದಾರೆ.

ಗುರುವಾರ ಸಂಜೆ ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಆಹಾರ ಸೇವಿಸುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ. ನಮ್ಮಿಬ್ಬರಿಗಾಗಿ ಆಹಾರ ಸೇವಿಸುತ್ತಿದ್ದೇನೆ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಫೋಟೋ ಅಪ್ಲೋಡ್ ಆದ 12 ಗಂಟೆಯಲ್ಲಿಯೇ 55 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಹಲವು ಅಭಿಮಾನಿಗಳು ಯಶ್ ರೀತಿಯಲ್ಲಿ ಮರಿ ಬಾ ಬರಲಿ ಅಂತಾ ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಪುಟ್ಟ ರಾಧೆ ಬರಲಿ ಅಂತಾ ಹೇಳಿದ್ದಾರೆ.

3 radhika pandit yashcopy 1518595621

ಆಗಸ್ಟ್ 12ರಂದು ರಾಧಿಕಾ ತಮ್ಮ ಮೊದಲ ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. “ಆಗಸ್ಟ್ 12 ನಾವು ಎಂಗೇಜ್ ಆಗಿದ್ದೀವಿ. ಇಂದಿಗೆ ಎರಡು ವರ್ಷ ಕಳೆಯಿತು. ಇದು ನಿಜವಾಗಿಯೂ `ಬಂಪಿ ರೈಡ್’ ಆಗಿದೆ.” ಎಂದು ಕಾಮಿಡಿಯಾಗಿ ಬರೆದುಕೊಂಡಿದ್ದರು. 2016 ಆಗಸ್ಟ್ 12 ರಂದು ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಗೋವಾದಲ್ಲಿ ರಿಂಗ್ ಬದಲಾಯಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಆದ್ದರಿಂದ ಆಗಸ್ಟ್ 12 ಕ್ಕೆ ಅವರು ನಿಶ್ಚಿತಾರ್ಥ ಮಾಡಿಕೊಂಡು ಎರಡು ವರ್ಷಗಳು ಕಳೆದಿದೆ. ಆ ಖುಷಿಯಲ್ಲಿ ಪತಿ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಗರ್ಭಿಣಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದರು.

https://www.instagram.com/p/BnY58bBAMR9/?taken-by=iamradhikapandit

ಜುಲೈ 25ರಂದು ಯಶ್ ತಮ್ಮ ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ವೈಜಿಎಫ್ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವೈಜಿಎಫ್ ಎಂದರೆ `ಯಶ್ ಗೊಯಿಂಗ್ ಟು ಬಿ ಎ ಫಾದರ್’ ಎಂದು ವಿಡಿಯೋದಲ್ಲಿ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಅಲ್ಲದೇ ನಟಿ ರಾಧಿಕಾ ಪಂಡಿತ್ ಕೂಡ “ಓ ನಾವು ಈಗ ಮೂವರಾಗುತ್ತಿದ್ದೀವಿ” ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು.

2016 ಡಿಸೆಂಬರ್ 9 ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲಿ ಈ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *