ಸಾನಿಯಾ ಮಿರ್ಜಾಗೆ ಕಿರುಕುಳ: ಅಂತರಾಷ್ಟ್ರೀಯ ಪಂದ್ಯದಿಂದ ನಿಷೇಧಕ್ಕೊಳಗಾದ ಬಾಂಗ್ಲಾ ಕ್ರಿಕೆಟಿಗ!

Public TV
1 Min Read
SABBIR SANIA MIRZA

ಢಾಕಾ: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರವರಿಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ 6 ತಿಂಗಳ ಕಾಲ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ.

2014 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಹಾಗೂ ಪತ್ನಿ ಸಾನಿಯಾ ಮಿರ್ಜಾ ಬಾಂಗ್ಲಾ ದೇಶಕ್ಕೆ ಪಂದ್ಯವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಮೈದಾನವನ್ನು ಪ್ರವೇಶಿಸುತ್ತಿರುವಾಗ ಶಬ್ಬೀರ್ ರೆಹಮಾನ್ ಸಾನಿಯಾರವನ್ನು ಚುಡಾಯಿಸಿದ್ದರು. ಇದರಿಂದ ಕೋಪಗೊಂಡ ಶೋಯಬ್ ಮಲ್ಲಿಕ್ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಢಾಕಾ ಮೆಟ್ರೋ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರ ಬಗ್ಗೆ ಬಾಂಗ್ಲಾ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

BCB logo

ಮೈದಾನದ ಒಳಗೂ ಹಾಗೂ ಹೊರಗಡೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಶಬ್ಬೀರ್ ರೆಹಮಾನ್‍ರಿಂದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ತೀವ್ರ ಮುಜುಗರಕ್ಕೀಡಾಗಿತ್ತು. ಹೀಗಾಗಿ ಪ್ರಕರಣಗಳ ತನಿಖೆ ನಡೆಸಲು ಶಿಸ್ತು ಪಾಲನಾ ಸಮಿತಿಯನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ನೇಮಕ ಮಾಡಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ, ಶಬ್ಬೀರ್ ರೆಹಮಾನ್‍ಗೆ 6 ತಿಂಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ.

ಈ ಮೊದಲು ಸಹ ಶಬ್ಬೀರ್ ಖಾಸಗಿ ಹೋಟೆಲ್‍ಗೆ ಅನುಮತಿ ಇಲ್ಲದೆ ಮಹಿಳೆಯನ್ನು ಕರೆದುಕೊಂಡು ಬಂದು ಕೊಠಡಿಯಲ್ಲಿರಿಸಿಕೊಂಡಿದ್ದಕ್ಕೆ 6 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಇನ್ನು ಶಿಕ್ಷೆಯ ಪ್ರಮಾಣ ಮುಗಿಯದೇ ಇರುವಾಗಲೇ ಮತ್ತೊಂದು ಶಿಕ್ಷೆಗೆ ಗುರಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *