ಮತಗಟ್ಟೆಯಲ್ಲೇ ಕಿತ್ತಾಡಿಕೊಂಡ ಅಭ್ಯರ್ಥಿಗಳು!

Public TV
1 Min Read
RCR GALATE

ರಾಯಚೂರು: ಸ್ಥಳೀಯ ಚುನಾವಣೆಯ ಮತದಾನದ ವೇಳೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಮತಗಟ್ಟೆಯಲ್ಲಿ ಕಿತ್ತಾಡಿಕೊಂಡ ಘಟನೆ ನಗರಸಭೆ ವಾರ್ಡ್ 26 ರಲ್ಲಿ ನಡೆದಿದೆ.

ಮತಗಟ್ಟೆ ಸಂಖ್ಯೆ 142 ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಾ ರಾಜ್ ಮೋತಾ ಹಾಗೂ ಪಕ್ಷೇತರ ಅಭ್ಯರ್ಥಿ ರಾಜಗೋಪಾಲ್ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಇಬ್ಬರು ಅಭ್ಯರ್ಥಿಗಳು ಬೂತ್ ಗೆ ಪದೇ ಪದೇ ಭೇಟಿ ನೀಡುತ್ತಿದ್ದರು ಅಲ್ಲದೇ, ಅಲ್ಲೇ ಮತದಾರರ ಮನವೊಲಿಸುವ ಯತ್ನ ಮಾಡುತ್ತಿರುವುದಾಗಿ ಪರಸ್ಪರ ಆರೋಪಿಸಿ ಮಾತಿನ ಚಕಮಕಿ ನಡೆಸಿ, ಕೈಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ: ನಾಚಿಕೆ ಆಗಲ್ವ ನಿಮಗೆ- ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ್‍ಗೆ ಛೀಮಾರಿ

vlcsnap 2018 08 31 09h13m45s561

ಅಭ್ಯರ್ಥಿಗಳ ಜಗಳದಿಂದಾಗಿ ಕೆಲ ಕಾಲ ಮತದಾನ ಸ್ಥಗಿತವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಹೊರಕ್ಕೆ ಹಾಕಿದ್ದು, ಮತದಾನ ಶಾಂತಿಯುವ ನಡೆಯಲು ಭದ್ರತೆ ಕಲ್ಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯಿಂದ ಪರಸ್ಪರ ಕಲ್ಲು ತೂರಾಟ – ಇಬ್ಬರಿಗೆ ಗಾಯ, ಬಿಗಿ ಪೊಲೀಸ್ ಬಂದೋಬಸ್ತ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *