5 ವರ್ಷದ ಪ್ರೀತಿ – ಜಾತಿ, ಧರ್ಮದ ನಡುವೆಯೂ ಒಂದಾದ ಜೋಡಿ

Public TV
1 Min Read
HSN MARG copy

ಹಾಸನ: ಪರಸ್ಪರ ಪ್ರೀತಿಸಿದ ಪ್ರೇಮಿಗಳಿಬ್ಬರು ಮನೆಯವರ ವಿರೋಧದ ನಡುವೆಯೂ ಜಿಲ್ಲೆಯ ದೇವಸ್ಥಾನದಲ್ಲಿ ಸರಳ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಜಗದೀಶ್ ಮತ್ತು ಹಸೀನ್ ತಾಜ್ ಸಾಂಸರಿಕ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು. ಜಗದೀಶ್ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದವರಾಗಿದ್ದು, ಹಸೀನ್ ತಾಜ್ ದಾವಣಗೆರೆ ಜಿಲ್ಲೆ ದುರ್ವಿಗೆರೆ ಗ್ರಾಮದ ನಿವಾಸಿ. ಇವರಿಬ್ಬರು ಜಾತಿ, ಧರ್ಮದ ಗೊಡವೆ ಮೀರಿ ಒಂದಾಗಿದ್ದಾರೆ.

HSN HSN LOVE MARRIAGE AV 3 copy

ಈ ಇಬ್ಬರು ಆಕಸ್ಮಿಕವಾಗಿ ಪರಿಚಯವಾಗಿ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿದೆ. ಆದರೆ ಇವರಿಬ್ಬರ ಮದುವೆಗೆ ಯುವತಿ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮನೆಯವರು ಮದುವೆಗೆ ಒಪ್ಪದಿದ್ದಾಗ ಊರು ಬಿಟ್ಟು ಹಾಸನಕ್ಕೆ ಬಂದಿದ್ದಾರೆ. ಬಳಿಕ ಶ್ರೀರಾಮ ಸೇನೆ ಸಹಕಾರದೊಂದಿಗೆ ಆಲೂರಿನ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ.

ಹಸೀನ್ ತಾಜ್ ಪೋಷಕರು ಮಗಳು ಕಾಣೆಯಾಗಿದ್ದಾಳೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ನವ ದಂಪತಿ ನಮಗೆ ಜೀವ ಬೆದರಿಕೆ ಇದೆ. ಆದ್ದರಿಂದ ನಮಗೆ ರಕ್ಷಣೆ ನೀಡುವಂತೆ ಹಾಸನ ಎಸ್‍ಪಿ ರಾಹುಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *