ಯಶ್, ಗಣೇಶ್ ಬಳಿಕ ಕೋಟ್ಯಧಿಪತಿಗೆ ಮತ್ತೊಬ್ಬ ಸ್ಯಾಂಡಲ್‍ವುಡ್ ಸ್ಟಾರ್

Public TV
1 Min Read
Kannadada Kotyadhipati

ಬೆಂಗಳೂರು: ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಸ್ಯಾಂಡಲ್ ವುಡ್ ನಾಯಕರಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಬಂದು ಆಟವಾಡಿ ಹಣ ಗೆದ್ದು ಹೋಗಿದ್ದಾರೆ. ಈಗ ಮೂರನೇ ನಟನಾಗಿ ರಕ್ಷಿತ್ ಶೆಟ್ಟಿ ಆಗಮಿಸುತ್ತಿದ್ದಾರೆ.

`ಕನ್ನಡದ ಕೋಟ್ಯಧಿಪತಿ’ 3ನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಅವಕಾಶ ಮಾಡಿಕೊಡಲಾಗಿತ್ತಿದೆ. ಇಲ್ಲಿಯವರೆಗೂ ಈ ಶೋನಲ್ಲಿ ಯಶ್ ಮತ್ತು ಗಣೇಶ್ ಕೇವಲ ಇಬ್ಬರು ನಟರು ಮಾತ್ರ ಭಾಗವಹಿಸಿದ್ದಾರೆ.

1rakshitshetty

`ಕನ್ನಡದ ಕೋಟ್ಯಧಿಪತಿ’ ಶೋ ಆರಂಭವಾಗಿ 50 ಸಂಚಿಕೆಯನ್ನು ಪೂರೈಸುತ್ತಿದೆ. ಆದ್ದರಿಂದ ಈ ವಿಶೇಷ ಸಂದರ್ಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಸ್ಪರ್ಧಿಯಾಗಿ ಶೋಗೆ ಬರಲಿದ್ದಾರೆ. ಈಗಾಗಲೇ ಕನ್ನಡದ ಕೋಟ್ಯಧಿಪತಿ ಶೋಗೆ ರಕ್ಷಿತ್ ಶೆಟ್ಟಿ ಸ್ಪರ್ಧಿಯಾಗಿ ಬಂದಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಆದ್ದರಿಂದ ಈ ಸಂಚಿಕೆ ವಾರತ್ಯಂದಲ್ಲಿ ಪ್ರಸಾರವಾಗಬಹುದು.

ಈ ಹಿಂದೆ ಕನ್ನಡದ ಕೋಟ್ಯಧಿಪತಿಗೆ ಮೊದಲು ಗಣೇಶ್ ಬಂದು 12.5 ಲಕ್ಷ ರೂ. ಗೆದ್ದಿದ್ದರು. ನಂತರ ಯಶ್ ಬಂದು 25 ಲಕ್ಷ ರೂ. ಗೆದ್ದುಕೊಂಡು ಹೋಗಿದ್ದರು. ಈ ಶೋ ಖಾಸಗಿ ವಾಹಿನಿಯಲ್ಲಿ ವಾರದ 5 ದಿನಗಳು ಮಾತ್ರ ಒಂದು ಗಂಟೆಯ ಸಮಯ ಪ್ರಸಾರವಾಗುತ್ತದೆ. ನಟ ರಮೇಶ್ ಅರವಿಂದ್ ಈ ಶೋ ನಿರೂಪಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *