ಆನೇಕಲ್: ವರಮಹಾಲಕ್ಷ್ಮಿ ಹಬ್ಬದಂದೇ ಮುಸುಕುದಾರಿ ಕಳ್ಳರು ಬಾಗಿಲು ಮುರಿದು ನಗದು, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಸರ್ಜಾಪುರದ ಎಸ್.ಎನ್.ಆರ್. ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.
ಮುನಿಸ್ವಾಮಿ ಎನ್ನುವವರ ಮನೆಯಲ್ಲಿ ನಾಲ್ವರು ಮುಸುಕುದಾರಿ ಕಳ್ಳರಿಂದ ಕೃತ್ಯ ಎಸಗಿದ್ದು, ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ ಮಾಡಲಾಗಿದೆ. ಖತರ್ನಾಕ್ ಕಳ್ಳರು ಕೆಲ ಮನೆಗಳ ಬಳಿ ಬಂದು ಸಿಸಿಟಿವಿ ಇರುವುದು ನೋಡಿ ವಾಪಾಸ್ ಆಗಿದ್ದಾರೆ. ಕೊನೆಗೆ ಸಿಸಿಟಿವಿ ಇಲ್ಲದ ಮನೆ ನೋಡಿ ಕಳ್ಳತನ ಮಾಡಿದ್ದಾರೆ.
ಈ ಘಟನೆ ಪಕ್ಕದ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಗೇಟ್ ತೆಗೆದು ಒಳನುಗ್ಗುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ರೀತಿ ಎಸ್ ಎನ್ ಆರ್ ಬಡಾವಣೆಯಲ್ಲಿ ಸತತ ನಾಲ್ಕನೇ ಬಾರಿ ಕಳ್ಳತನ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತ ಬಡಾವಣೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv