ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮನವಿ

Public TV
1 Min Read
Puneeth Rajkumar copy

ಬಾಗಲಕೋಟೆ: ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಮದುವೆ ಸಮಾರಂಭದಲ್ಲಿ ನಟ ಪುನೀತ್ ರಾಜ್‍ಕುಮಾರ್ ಭಾಗವಹಿಸಿ ನವ ದಂಪತಿಗೆ ಶುಭಕೋರಿದ್ದಾರೆ.

ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಬಾಗಲಕೋಟೆ ಮೂಲದ ನಟಿ ಅಪೇಕ್ಷಾ ಪುರೋಹಿತ ಕೈ ಹಿಡಿದರು. ಎರಡೂ ಕುಟುಂಬಸ್ಥರ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಪುನೀತ್ ರಾಜ್‍ಕುಮಾರ್, ಪವನ್ ಅವರ ಮದುವೆ ಮೂಲಕ ಬಾಗಲಕೋಟೆಗೆ ಬರುವ ಅವಕಾಶ ಲಭಿಸಿದೆ. ಇಬ್ಬರ ಜೀವನ ಸುಖಮಯವಾಗಿರಲಿ ಎಂದು ಹರಿಸಿದರು.

PAVAN WODEYAR MARRY copy

ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಅಂದಹಾಗೇ ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್‍ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.

ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ `ನಟ ಸಾರ್ವಭೌಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *