ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ತಮ್ಮ ಪತಿಯ ಮಾರ್ಗವನ್ನೇ ಪಾಲಿಸುತ್ತಿದ್ದಾರೆ. ಸದ್ಯ ದರ್ಶನ್ ಪ್ರಾಣಿಪ್ರಿಯರಾಗಿದ್ದು, ವಿಜಯಲಕ್ಷ್ಮೀ ಕೂಡ ಕಪ್ಪು ಬೆಕ್ಕಿನ ಬಗ್ಗೆ ಟ್ವೀಟ್ ಮಾಡಿ ಪ್ರಾಣಿ ಪ್ರೀತಿ ತೋರಿಸಿದ್ದಾರೆ.
ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹಾಗೆಯೇ ಅವರ ಪತ್ನಿ ವಿಜಯಲಕ್ಷ್ಮೀಗೆ ಬೆಕ್ಕುಗಳೆಂದರೆ ಇಷ್ಟ. ಅದಕ್ಕೆ ವಿಶೇಷ ಪ್ರೀತಿಯನ್ನು ತೋರಿಸುತ್ತಾರೆ. ಅಲ್ಲದೇ ವಿಜಯಲಕ್ಷ್ಮೀ ತಮ್ಮ ಮನೆಯಲ್ಲಿ ವಿವಿಧ ರೀತಿಯ ಬೆಕ್ಕುಗಳನ್ನು ಸಾಕಿದ್ದಾರೆ.
ವಿಜಯಲಕ್ಷ್ಮೀ ಕಪ್ಪು ಬೆಕ್ಕಿನ ಫೋಟೋ ಹಾಕಿ “ಕಪ್ಪು ಬೆಕ್ಕು ನಮ್ಮ ದಾರಿಗೆ ಅಡ್ಡ ಬಂದರೆ ಅದನ್ನು ಶುಭಶಕುನ ಎಂದು ಹೇಳುತ್ತಾರೆ. ಆದರೆ ನೀವು ಎಲ್ಲಾದರೂ ಈ ಕಪ್ಪು ಬೆಕ್ಕನ್ನು ಕಂಡರೆ ಅದರ ಜೊತೆ ಪ್ರೀತಿಯಿಂದಿರಿ. ಕಪ್ಪು ಬೆಕ್ಕು ಒಂದು ಒಳ್ಳೆಯ ಪ್ರಾಣಿ, ಅಲ್ಲದೇ ಅದು ಎಲ್ಲರ ಪ್ರೀತಿಗೆ ಅರ್ಹ” ಎಂದು ಟ್ವೀಟ್ ಮಾಡಿದ್ದಾರೆ.
They say crossing a black cat is bad luck but if u see one….be sure to pet it because it’s a nice animal that deserves to be loved❤️ pic.twitter.com/KmlStb7phI
— Vijayalakshmi darshan (@vijayaananth2) August 12, 2018
ಕಪ್ಪು ಬೆಕ್ಕು ಅಡ್ಡ ಬಂದರೆ ಸಾಕಷ್ಟು ಜನ ಆ ಬೆಕ್ಕಿಗೆ ಬೈದು ಸ್ವಲ್ಪ ಹೊತ್ತು ಅಲ್ಲೇ ನಿಂತು ನಂತರ ಮುಂದೆ ಹೋಗುತ್ತಾರೆ. ಹೀಗಿರುವಾಗ ವಿಜಯಲಕ್ಷ್ಮೀ ಕಪ್ಪು ಬೆಕ್ಕಿನ ಬಗ್ಗೆ ಜನರು ಇಟ್ಟಿರುವಂತಹ ನಂಬಿಕೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.
ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಇಷ್ಟ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಬಳಿ ಏಳೆಂಟು ರೀತಿಯ ನಾಯಿಗಳು, ಪಕ್ಷಿಗಳು, ಕುದುರೆ ಸೇರಿ ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರು ಮೃಗಾಲಯದಲ್ಲಿ ಆನೆ ಹಾಗೂ ಹುಲಿಗಳನ್ನು ದತ್ತು ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv