ಚಿಕ್ಕಬಳ್ಳಾಪುರ: ಒಂದೆಡೆ ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಗದ್ದೆಗಿಳಿದು ಭತ್ತ ನಾಟಿ ಮಾಡಿದ್ರು. ಆದ್ರೆ ಮತ್ತೊಂದೆಡೆ ರೈತರು ನಮ್ಮನ್ನು ರೈತರನ್ನಾಗಿ ಬದುಕಲು ಬಿಡಿ. ಕುಮಾರಸ್ವಾಮಿ ಅವರೇ ನಮ್ಮ ಜಮೀನು ಕಿತ್ತುಕೊಳ್ಳಬೇಡಿ ಎಂದು ಮನವಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರದ ರೈತರು ನಮ್ಮ ಭೂಮಿ ನಮಗೆ ಉಳಿಸಿಕೊಡಿ. ಸಾಗುವಳಿ ಚೀಟಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಇಡೀ ದೇಶದಲ್ಲಿ ನಮಗಿರುವುದು ಇದೊಂದು ತುಂಡು ಭೂಮಿ. ಇಲ್ಲಿಂದ ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಕೃಷಿ ಸಚಿವರ ತವರಾದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಅಂಗಲಾಚುತ್ತಿದ್ದಾರೆ.
ಗೌರಿಬಿದನೂರು ಗಡಿಭಾಗದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಅರಸಾಪುರ ತಾಂಡಾದ ರೈತರು ಗೌರಿಬಿದನೂರಿನ ಹೊಸೂರು ಸಮೀಪದ ಹೊಸಕೋಟೆ ಕ್ರಾಸ್‍ನ ಸರ್ವೆ ನಂ.76 ರಲ್ಲಿ ಹಲವು ವರ್ಷಗಳಿಂದ ಗೋಮಾಳ ಜಮೀನನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಈ ಜಮೀನನ್ನು ತಮಗೆ ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕು ಎಂದು ಅನೇಕ ಬಾರಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಸದ್ಯಕ್ಕೆ ಇದೇ ಭೂಮಿಯನ್ನು ಇಂಟರ್ ನ್ಯಾಷನಲ್ ಸೈನ್ಸ್ ಪಾರ್ಕ್ ನಿರ್ಮಿಸಲು ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕಂಗಲಾಗಿರುವ ರೈತರು ಭೂಮಿ ಉಳಿಸಿಕೊಳ್ಳಲು ಅಂಗಲಾಚುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews