ಹಾಸನ: ಮಂಡ್ಯದಲ್ಲಿ ಗದ್ದೆನಾಟಿ ಮಾಡಿ ಸದ್ದು ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇದೀಗ ತವರು ಜಿಲ್ಲೆ ಹಾಸನಕ್ಕೆ ಶ್ರಾವಣ ಸೋಮವಾರದ ಪೂಜೆಗಾಗಿ ಎಂಟ್ರಿಕೊಟ್ಟಿದ್ದಾರೆ.
ಶ್ರಾವಣ ಮಾಸ ಹಿನ್ನಲೆಯಲ್ಲಿ ಅವರ ಮನೆ ದೇವರು ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯ, ಅವರ ತಂದೆಯ ಮೆಚ್ಚಿನ ದೈವ ಮಾವಿನ ಕೆರೆ ಬೆಟ್ಟದ ರಂಗನಾಥಸ್ವಾಮಿ ಸೇರಿದಂತೆ ಅವರ ಕುಲದೈವದ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಪೂಜೆಗೆ ಸಿಎಂ ಕುಮಾರಸ್ವಾಮಿ ತೆರಳಲಿದ್ದಾರೆ. ಸಂಜೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಕೂಡ ಭೇಟಿ ನೀಡಲಿದ್ದಾರೆ. ತಡ ರಾತ್ರಿ ಹಾಸನದ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿರುವ ಎಚ್ ಡಿ ಕುಮಾರಸ್ವಾಮಿ 7 ಗಂಟೆಯಿಂದ ಹರದನಹಳ್ಳಿಯಲ್ಲಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಕುಮಾರಸ್ವಾಮಿ ಸ್ವಾಮಿ ಜೊತೆ ತಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಸಹೋದರ ಸಚಿವ ಹೆಚ್ ಡಿ ರೇವಣ್ಣ ಭಾಗಿಯಾಗಲಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಗೂ ತಮ್ಮ ಕುಮಾರ ಪರ್ವ ಯಾತ್ರೆಯನ್ನು ಆರಂಭಿಸುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ರಂಗನಾಥಸ್ವಾಮಿ ದೇವಾಲಯ ಬಳಿ ಕುಳಿತು ದೇವೇಗೌಡರು ತಮ್ಮ ಮಗ ಸಿಎಂ ಆಗಿಯೇ ಆಗುತ್ತಾನೆ ಅಂತ ಭವಿಷ್ಯ ನುಡಿದಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews