ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬೈಕ್‍ಗಳ ಮೇಲೆ ಎಷ್ಟು ಕ್ರೇಜ್ ಹೊಂದಿದ್ದಾರೆ ಎಂಬುವುದು ಅವರ ಅಭಿಮಾನಿಗಳಿಗೆ ಈಗಾಗಲೇ ತಿಳಿದಿದೆ. ಆದರೆ ಸದ್ಯ ಧೋನಿ ತಮ್ಮ ಬಳಿ ಇರುವ ಬೈಕ್‍ಗಳಿಗಾಗಿ ಮ್ಯೂಸಿಯಂ ನಿರ್ಮಿಸಿದ್ದಾರೆ ಎಂದು ಪತ್ನಿ ಸಾಕ್ಷಿ ಧೋನಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಅಂದಹಾಗೇ ಧೋನಿ ಬೈಕ್‍ಗಳಿಗಾಗಿ ನಿರ್ಮಿಸಿರುವ ಕಟ್ಟಡದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಪತ್ನಿ ಸಾಕ್ಷಿ, ಈ ಮನುಷ್ಯ ಆಟಿಕೆಗಳನ್ನು ಎಷ್ಟು ಪ್ರೀತಿಸುತ್ತಾನೆ ನೋಡಿ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಧೋನಿ ತಾವು ಖರೀದಿಸಿದ ಬೈಕ್ ಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಮೊದಲ ಬೈಕ್ ನ ಫೋಟೋವನ್ನು ಶೇರ್ ಮಾಡಿ ಹರ್ಷವ್ಯಕ್ತಪಡಿಸಿದ್ದರು. ಧೋನಿ ಬಳಿ ಈಗಾಗಲೇ ಹಲವು ಕಂಪೆನಿಗಳ ವಿವಿಧ ಶ್ರೇಣಿಯ ಬೈಕ್‍ಗಳಿದ್ದು, ದಿ ಕಾನ್ಫಿಡರೇಟ್ ಫ್ಯಾಟ್‍ಬಾಯ್, ಯಮಹಾ ವೈಝಡ್‍ಎಫ್600, ಡುಗಾಟಿ 1098, ಥಂಡರ್ ಕ್ಯಾಟ್, ಕವಾಸಕಿ ನಿಂಝಾ ಝಡ್‍ಎಕ್ಸ್14ಆರ್ ಹಾಗೂ ಇದೇ ಕಂಪೆಮಿಯ ನಿಂಝಾ ಎಚ್-2 ಬೈಕ್‍ಗಳು ಧೋನಿ ಬಳಿಯಿದೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ ಬಿಡುವು ಸಿಕ್ಕ ಸಂದರ್ಭದಲ್ಲಿ ರಾಂಚಿ ಸುತ್ತಮುತ್ತ ಜಾಲಿ ರೈಡ್ ಮಾಡುತ್ತಿದ್ದ ಧೋನಿ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಟೀಂ ಇಂಡಿಯಾದ ಯಾವುದೇ ಆಟಗಾರ ಬೈಕ್ ಗೆದ್ದರೆ ಕ್ರೀಡಾಂಗಣದಲ್ಲೇ ಆಟಗಾರರೊಂದಿಗೆ ರೌಂಡ್ ಹಾಕಿದ ಸಂದರ್ಭಗಳನ್ನು ನೆನಪಿಸಬಹುದಾಗಿದೆ. ಧೋನಿ ಕೆಲವು ಕಂಪೆನಿಗಳ ಬ್ರಾಂಡ್ ಅಂಬಾಸಿಡರ್ ಸಹ ಆಗಿದ್ದು, ಹಲವು ಬೈಕ್ ಶೋ ಗಳಲ್ಲೂ ಪಾಲ್ಗೊಳ್ಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews
ಧೋನಿ ಇದುವರೆಗೂ ಹಂಚಿಕೊಂಡಿರುವ ಪ್ರಮುಖ ಬೈಕ್‍ಗಳ ಫೋಟೋ ನೋಡಿ:
My first bike pic.twitter.com/Die1cZ22YW
— Mahendra Singh Dhoni (@msdhoni) September 12, 2013
https://www.instagram.com/p/1NIV1tyuJf/?utm_source=ig_embed&utm_campaign=embed_loading_state_control
https://www.instagram.com/p/8IRz0byuHa/?utm_source=ig_embed&utm_campaign=embed_loading_state_control
https://www.instagram.com/p/8IPeTVSuD1/?utm_source=ig_embed&utm_campaign=embed_loading_state_control
https://www.instagram.com/p/t2HE1FyuKg/?utm_source=ig_embed&utm_campaign=embed_loading_state_control
https://www.instagram.com/p/o-4kzdyuGj/?utm_source=ig_embed&utm_campaign=embed_loading_state_control
https://www.instagram.com/p/t2HT0eyuKl/?utm_source=ig_embed&utm_campaign=embed_loading_state_control