ಕ್ಯಾನ್ಬೆರಾ: ಲವ್ ಬ್ರೇಕಪ್ ಆಗಿದ್ದಕ್ಕೆ ಆಸ್ಟ್ರೇಲಿಯಾದ ಯುವತಿಯೊಬ್ಬಳು ಯುವಕನ 2.75 ಕೋಟಿ ರೂ. ವೆಚ್ಚದ ಮರ್ಸಿಡೀಸ್ ಬೆಂಜ್ ಎಸ್ 63 ಎಂಎಂಜಿ ಕೂಪ್ ಕಾರಿನ ಮೇಲೆ ಅಶ್ಲೀಲವಾಗಿ ಬರೆದು ಜಖಂಗೊಳಿಸಿದ್ದಾಳೆ.
ಯುವಕ ತನ್ನ ಕಾರನ್ನು ಮನೆಯ ಹೊರಗಡೆ ಪಾರ್ಕ್ ಮಾಡಿದ್ದನು. ಮಧ್ಯಾಹ್ನದ ವೇಳೆ ಆಗಮಿಸಿದ ಯುವತಿ ಆತನ ಕಾರ್ ಪಕ್ಕದಲ್ಲೇ ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಯುವತಿ 20 ವರ್ಷದವಳು ಎಂದು ಹೇಳಲಾಗಿದ್ದು, ಕಾರಿನಿಂದ ಇಳಿಯುವಾಗ ತನ್ನ ಕೈಯಲ್ಲಿ ಸ್ಪ್ರೇ ಪೇಂಟ್‍ನ ಕ್ಯಾನ್ ಹಿಡಿದಿದ್ದಳು.
ಯುವತಿ ಸ್ಪ್ರೇ ಪೇಂಟ್‍ಯಿಂದ ಕಾರಿನ ಮೇಲೆ ಮೋಸಗಾರ ಹಾಗೂ ಕೆಲವು ಅಶ್ಲೀಲ ಪದಗಳನ್ನು ಬರೆದಿದ್ದಾಳೆ. ಅಲ್ಲದೇ ಕಾರಿನ ಕೆಲ ಭಾಗಗಳಲ್ಲಿ ಕಪ್ಪು ಬಣ್ಣ ಹಚ್ಚಿ ಕಾರನ್ನು ಹಾಳು ಮಾಡಿದ್ದಾಳೆ. ಅಷ್ಟಕ್ಕೂ ಸಮಧಾನ ಆಗದ ಯುವತಿ ಬೇಸ್‍ಬಾಲ್ ಬ್ಯಾಟ್‍ನಿಂದ ಕಾರಿನ ಕಿಟಕಿಯನ್ನು ಒಡೆದಿದ್ದಾಳೆ.
ಯುವಕ ಈ ಕಾರನ್ನು ಕೆಲವು ದಿನಗಳ ಹಿಂದೆಯಷ್ಟೇ ಖರೀದಿ ಮಾಡಿದ್ದ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews